ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಆಮಿಷಕ್ಕೆ ಒಳಗಾಗಿ ರೌಡಿಪಟ್ಟ ಸಲ್ಲ'

Rashmi Kasaragodu
Updated On : 26 Mar 2014, 1:28 am

ಮಾಗಡಿ: ಆಸೆ ಆಮಿಷಗಳಿಗೆ ಬಲಿಯಾಗಿ, ರೌಡಿಪಟ್ಟ ಕಟ್ಟಿಕೊಳ್ಳಬೇಡಿ, ಸಮಾಜದಲ್ಲಿ ಉತ್ತಮ  ಪ್ರಜೆಗಳಾಗಿ ಬಾಳುವುದನ್ನು ರೂಢಿಸಿಕೊಳ್ಳುವಂತೆ ಸಿಪಿಐ ಯಲಗಯ್ಯ ಕರೆ ನೀಡಿದರು.
 ಅವರು ಪೊಲೀಸ್ ಠಾಣೆ ಆವರಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳ ಸಭೆ ಕರೆದು ಪರೇಡ್ ನಡೆಸಿ ನಂತರ ಮಾತನಾಡಿ ಶಾಂತಿಯುತ ಚುನಾವಣೆ ನಡೆಸುವ ಉದ್ದೇಶ ಹೊಂದಲಾಗಿದೆ.ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸುಮಾರು ವರ್ಷಗಳಿಂದ ರೌಡಿಶೀಟರ್‌ನಲ್ಲಿ ಹೆಸರಿದ್ದು, 10 ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೆ ಇರುವವರನ್ನು ರೌಡಿಶೀಟರ್‌ನಿಂದ ಕೈಬಿಡಲಾಗಿದೆ ಎಂದರು.
ತಾವರೆಕೆರೆ ಪಿಎಸೈ ರೌಡಿಗಳು ಲೋಕಸಭಾ ಚುನಾವಣೆ ವೇಳೆ ಅಭ್ಯರ್ಥಿಗಳ ಪರ ಮತಯಾಚಿಸಬಾರದು, ಮತದಾನ ದಿನ ಮತಗಟ್ಟೆ ಬಳಿ ನಿಂತು ಮತಯಾಚಿಸುವುದು ಸಲ್ಲದು ಎಂದು ಎಚ್ಚರಿಕೆ ನೀಡಿದರು.
ಪಿಎಸೈಐ ಧರ್ಮೇಗೌಡ, ಕುದೂರು ಪಿಎಸೈ ಲೋಹಿತ್, ಪೊಲೀಸ್ ಸಿಬ್ಬಂದಿಗಳಾದ ಶಾಂತರಾಜು, ರಾಜು, ಮೂರ್ತಿ, ಮುತ್ತಪ್ಪ, ಬಸವರಾಜು, ಚಂದ್ರಪ್ಪ ಶಿವಕುಮಾರ್, ಬೈರಪ್ಪ, ಗೋವಿಂದರಾಜು, ಮಲ್ಲಿಕಾರ್ಜುನ ಪೂಜಾರಿ, ಜೋಸೆಫ್, ಶಿವಕುಮಾರಸ್ವಾಮಿ, ಚನ್ನಕೇಶವ, ರಮೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement