ವಿದ್ಯಾರ್ಥಿಗಳಿಂದ ಸಾಮೂಹಿಕ ರಕ್ತದಾನ
ಕನಕಪುರ: ಲಯನ್ಸ್ ಹಾಗೂ ಲಿಯೋ ಕನಕಪುರ, ಜೈನ್ ಎಂಜಿನಿಯರಿಂಗ್ ಕಾಲೇಜು ರಸ್ತೆ ಜಕ್ಕಸಂದ್ರ, ಅಧ್ವಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಲಯನ್ಸ್ ಸಂಸ್ಥೆ ಸಹ ನಿರ್ದೇಶಕ ಡಾ.ಮುರಳೀಧರ ಉದ್ಘಾಟನೆ ನೆರವೇರಿಸಿದರು. ಲಯನ್ಸ್ ಅಧ್ಯಕ್ಷ ಕೆ.ಜಿ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಶಿಬಿರದಲ್ಲಿ ಯುವಕ-ಯುವತಿಯರು ರಕ್ತದಾನ ಮಾಡಿದರು. ಒಟ್ಟಾರೆ 361 ಸೀಸೆಯಷ್ಟು ರಕ್ತ ಸಂಗ್ರಹಿಸಿ ಲಯನ್ಸ್ ರಕ್ತನಿಧಿ ಹಾಗೂ ಕಿದ್ವಾಯಿ ರಕ್ತನಿಧಿಗೆ ನೀಡಲಾಯಿತು.
ಡಾ. ಟಿ.ಜಿ.ಎಸ್.ಮೂರ್ತಿ, ಡಾ.ರಾಮನರಸಿಂಹ, ಡಾ.ಗೋಪಾಲಕೃಷ್ಣ, ಡಾ.ಸಿ.ಬಿ.ಮೋಹನ್, ಪದಾಧಿಕಾರಿಗಳಾದ ರೇಣುಕುಮಾರ್,ಪ್ರಶಾಂತ್, ಶಿವಕುಮಾರ್, ವೆಂಕಟೇಶ್ ಮತ್ತಿತರರು ನೇತೃತ್ವ ವಹಿಸಿದ್ದರು.