ಶಾಸಕ ತಮ್ಮಣ್ಣರಿಂದ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ವಿತರಣೆ
ಭಾರತೀನಗರ: ಶಿಕ್ಷಣ ಮಾರ್ಗದರ್ಶಿಯಿಂದ ಪ್ರಯೋಜನ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲಿ ಎಂದು ಶಾಸಕ ರಾದ ಡಿ.ಸಿ. ತಮ್ಮಣ್ಣ ಆಶಿಸಿದರು.
ಮದ್ದೂರು ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಪತ್ರಿಕೆಗಳನ್ನು ವರ್ಷವಿಡಿ ಉಚಿತವಾಗಿ ವಿತರಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶಿ ಉಪಯೋಗದ ಜೊತೆಗೆ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳುವಂತಾಯಿತು ಎಂದರು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಹೆಚ್ಚು ಅಂಕಗಳಿಸಿದರೆ ಮಾತ್ರ ತಾವು ಉಚಿತವಾಗಿ ಪತ್ರಿಕೆ ನೀಡಿದ್ದಕ್ಕೆ ಸಾರ್ಥಕತೆ ಬರುವುದು ಎಂದು ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣ ಪ್ರದೇಶದ ಮಕ್ಕಳಿಗಿಂತ ಯಾವುದಕ್ಕೂ ಕಡಿಮೆ ಇಲ್ಲವೆಂಬಂತೆ ಎಲ್ಲಾ ಕ್ಷೇತ್ರದಲ್ಲೂ ಗಣನೀಯವಾಗಿ ಸಾಧನೆ ಮಾಡಬೇಕು ಎಂದ ಅವರು ತಿಳಿಸಿದರು.