ಉದಯ್ರಾಜ್ ಸಿಂಗ್ ಕೊಲೆ: ತನಿಖೆ ಚುರುಕು
ಬೆಂಗಳೂರು: ನಿವೃತ್ತ ಬ್ಯಾಂಕ್ ಉದ್ಯೋಗಿ ಉದಯ್ರಾಜ್ ಸಿಂಗ್ ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಬಂಧನಕ್ಕೆ ಆಡುಗೋಡಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಲೆ ಮಾಡಿ ಪರಾರಿಯಾಗುವ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಮೂವರು ಆರೋಪಿಗಳ ಪೈಕಿ ಒಬ್ಬ ಸೇನಾಧಿಕಾರಿಯೊಬ್ಬರ ಮಗ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲೇ ವಜ್ರದ ಹಾರ ಮಾರಾಟ ಮಾಡುವುದು ಪತ್ನಿ ಸುಶೀಲಾಗೆ ಇಷ್ಟವಿರಲಿಲ್ಲ. ಆದರೂ, ಉದಯ್ ಸಿಂಗ್ ಮನೆಯಲ್ಲೇ ಹಾರವನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದರು.