ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಬಾಂಧವ್ಯ
ಕನಕಪುರಛ ಸಮುದಾಯ ಸೇವೆಯ ಮೂಲಕ ಸಮಾಜದ ಋಣವನ್ನು ತೀರಿಸಲು ರಾಷ್ಟ್ರೀಯ ಸ್ವಯಂಸೇವಾ ಯೋಜನೆ ಅವಕಾಶ ಕಲ್ಪಿಸಿಕೊಡುತ್ತದೆ. ಪರಸ್ಪರ ಸಹಕಾರ, ಸ್ನೇಹ, ಒಡನಾಟಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಬಾಂಧವ್ಯವನ್ನು ರೂಪಿಸುತ್ತದೆ ಎಂದು ಗ್ರಾಮವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ. ತಿಮ್ಮಪ್ಪ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕುರುಬರಹಳ್ಳಿ ಗ್ರಾಮದಲ್ಲಿ ರೂರಲ್ ಪದವಿ ಕಾಲೇಜು ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಪ್ರಾಂಶುಪಾಲ ಡಾ. ಶಿವಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದ ಚರಂಡಿಗಳ ಸ್ವಚ್ಛತೆ, ರಸ್ತೆಗಳ ದುರಸ್ತಿ,ದೇವಾಲಯ ಆವರಣದ ಸ್ವಚ್ಛತೆಗಳನ್ನು ನಡೆಸಿದರು. ಶಿಬಿರಾಧಿಕಾರಿ ಕಬ್ಬಾಳೇಗೌಡ ಮಾತನಾಡಿ
ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುತ್ತವೆ, ಸಮರ್ಪಣಾ ಭಾವದಿಂದ ದುಡಿಯುವುದನ್ನು ಕಲಿಸಿಕೊಡುತ್ತವೆ. ಯಾವುದೇ ಜಾತಿ, ಮತ, ಧರ್ಮ, ಪಂಥಗಳಿಲ್ಲದೆ, ವೈಷಮ್ಯಗಳನ್ನು ಮರೆತು ಸಮಾನತೆಯಿಂದ ಬಾಳುವುದನ್ನು ಪರಿಚಯ ಮಾಡಿಕೊಡುತ್ತದೆ ಎಂದು ಹೇಳಿದರು. ಮುಖ್ಯಅತಿಥಿಗಳಾಗಿ ಕಾರ್ಯದರ್ಶಿ ಸಿ.ರಮೇಶ್, ಜಂಟಿಕಾರ್ಯದರ್ಶಿ ಮಾನಸ ನಾಗರಾಜ್, ಶಿವಕುಮಾರ್, ಮೇಜರ್ ಮುನಿರಾಜಪ್ಪ ಆಗಮಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಚೈತನ್ಯ ಟ್ರಸ್ಟ್‌ನ ಹೊಳಸಾಲಯ್ಯ ಸಂಗಡಿಗರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಸಹಶಿಬಿರಾಧಿಕಾರಿ ಅರುಣ್‌ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಪ್ರಸನ್ನ ನಿರೂಪಿಸಿದರು. ವಿಜೇಂದ್ರ ವಂದಿಸಿದರು.0