ಗೀತಂ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ
ದೊಡ್ಡಬಳ್ಳಾಪುರ: ಇಲ್ಲಿನ ನಾಗದೇನಹಳ್ಳಿ ಬಳಿ ಇರುವ ಗೀತಂ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮಿಹಿರ್ಮ ಮೊಬೈಲ್ ಸಲ್ಯೂಷನ್ಸ್ನ ಸಿಇಓ ನೀಮನ್ನಾ ಜಾನಿ, ಬ್ರಿಡ್ಜಿಂಗ್ದ್ ಗ್ಯಾಪ್ ಬಟ್ವೀನ್ ಕ್ಲಾಸ್ ರೂಂ ಅಂಡ್ ಆಫೀಸ್ ರೂಂ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಂವಹನ ಕೌಶಲದಿಂದ ಉನ್ನತ ಬಾಂಧವ್ಯಗಳನ್ನು ಸೃಷ್ಟಿಸಿಕೊಳ್ಳಬಹುದು. ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಅದು ಸಹಕಾರಿ ಎಂದು ವಿವರಿಸಿದರು.ಗೀತಂ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಕೆ.ವಿಜಯಭಾಸ್ಕರರಾವ್, ಸಹಾಯಕ ಪ್ರಾಂಶುಪಾಲ ಡಾ.ಎನ್.ವಿ. ಕೃಷ್ಣಪ್ರಸಾದ್, ರಮೇಶ್ ನಾಯಕ್, ಎಂ.ವಿ.ಎನ್.ಮಾಧವಿ ಲತಾ ಮತ್ತು ಕಾರ್ಯಕ್ರಮ ಸಂಯೋಜಕರು ಹಾಜರಿದ್ದರು.
ಜೆಡಿಯು ಅಭ್ಯರ್ಥಿಗಳು
ಬೆಂಗಳೂರು: ಲೋಕಸಭಾ ಚುನಾವಣೆಗೆ ಜನತಾದಳ(ಸಂಯುಕ್ತ) ಪಕ್ಷ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಗುಲ್ಬರ್ಗ ಕ್ಷೇತ್ರದಿಂದ ತಿಪ್ಪಣ್ಣ ಬಿ.ಒಡೆಯರ್, ಬಾಗಲಕೋಟೆಯಿಂದ ಸದಾಶಿವ ಶಿದೆಮಲ್ಲಪ್ಪ ಕಣಬೂರ್, ಬೀದರ್ನಿಂದ ಎಂ.ಆರ್.ರಂಗನಾಥ್, ಚಿತ್ರದುರ್ಗಕ್ಕೆ ಎಂ.ಕುಂಭಯ್ಯ, ತುಮಕೂರಿನಿಂದ ಡಾ.ಇಂತಿಯಾಸ್ ಅಹಮದ್, ಮೈಸೂರಿನಿಂದ ಎಸ್.ಪಿ.ಮಹಾದೇವಪ್ಪ, ಬೆಂಗಳೂರು ದಕ್ಷಿಣದಿಂದ ಸೈಯದ್ ಮೆಹಬೂಬ್, ಚಿಕ್ಕಬಳ್ಳಾಪುರದಿಂದ ಜಿ.ಕೆ.ಸಿ ರೆಡ್ಡಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.