ಅರಣ್ಯಕಾಯಿದೆ ಉಲ್ಲಂಘನೆ: ದೂರು ದಾಖಲು
ಕನಕಪುರ: ಕಲ್ಲುಗಣಿ ಗುತ್ತಿಗೆ ಅವಧಿ ಮುಗಿದಿದ್ದರೂ ನವೀಕರಣ ನಡೆಸದೆ ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಿರುವ ಕುರುಬಳ್ಳಿ ಶಂಕರ್ ಹಾಗೂ ಗಣಿಗುತ್ತಿಗೆದಾರರಾದ ಗೀತಾ ಎಂಬುವವರ ಮೇಲೆ ಅರಣ್ಯಕಾಯಿದೆ ಉಲ್ಲಂಘನೆ ಮೇಲೆ ದೂರು ದಾಖಲಾಗಿದೆ.
ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಸರ್ವೆ ನಂ.68 ಚೀಲಂದವಾಡಿ ರಕ್ಷಿತ ಅರಣ್ಯಪ್ರದೇಶಕ್ಕೆ ಒಳಪಡುತ್ತಿದ್ದು, ಗಣಿ ಇಲಾಖೆ ಹಾಗೂ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸಾತನೂರು ವಲಯ ಅರಣ್ಯಾಧಿಕಾರಿ ಪದ್ಮನಾಭ್ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದ್ದಾರೆ.