ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉಚಿತ ದಂತಚಿಕಿತ್ಸೆ, ನೇತ್ರ ತಪಾಸಣಾ ಶಿಬಿರ

Rashmi Kasaragodu
Updated On : 28 Mar 2014, 2:28 am

ಕನಕಪುರ: ರೂರಲ್ ಪದವಿ ಕಾಲೇಜು ರಾಷ್ಟ್ರೀಯ ಸ್ವಯಂಸೇವಾ ವಿಭಾಗ, ಒಕ್ಕಲಿಗರ ಸಂಘ ದಂತವೈದ್ಯ ಕಾಲೇಜು, ಶ್ರದ್ಧಾ ಐ ಕೇರ್ ಬೆಂಗಳೂರು ವತಿಯಿಂದ ಉಚಿತ ದಂತಚಿಕಿತ್ಸೆ ಹಾಗೂ ನೇತ್ರ ತಪಾಸಣಾ ಶಿಬಿರ ಕುರುಬರಹಳ್ಳಿ ಗ್ರಾಮದಲ್ಲಿ ನಡೆಯಿತು. ಶಿಬಿರದಲ್ಲಿ ಒಟ್ಟಾರೆ 287 ಜನರಿಗೆ ದಂತ ತಪಾಸಣೆ ನಡೆಸಲಾಯಿತು. ಗ್ರಾಮದ 325 ಜನರಿಗೆ  ನೇತ್ರ ತಪಾಸಣೆ ನಡೆಸಲಾಯಿತು.  ಶಿಬಿರದ ಉದ್ಘಾಟನೆಯನ್ನು ಪ್ರಾಂಶುಪಾಲ ಡಾ. ಶಿವಬಸವೇಗೌಡ ನೆರವೇರಿಸಿದರು. ಶಿಬಿರಾಧಿಕಾರಿ  ಕಬ್ಬಾಳೇಗೌಡ, ಉಪ ಪ್ರಾಂಶುಪಾಲ ಮೇಜರ್ ಡಾ.ಮುನಿರಾಜಪ್ಪ, ಡಾ.ರಂಗಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು. ಎನ್ಎಸ್ಎಸ್ ಶಿಬಿರದ ಅಂಗವಾಗಿ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣೆ ಹಾಗೂ ಲಸಿಕೆ ನೀಡಿಕೆ ಶಿಬಿರ, ಏಡ್ಸ್ ಜಾಗೃತಿ ಶಿಬಿರಗಳನ್ನೂ ಕೂಡಾ ನಡೆಸಲಾಯಿತು.
ಅನಧಿಕೃತ ಮದ್ಯ ಮುಟ್ಟುಗೋಲು
ನೆಲಮಂಗಲ:  ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕು ಆರಕ್ಷಕ ಉಪ ನಿರೀಕ್ಷಕರು, ಅಬಕಾರಿ, ಇಲಾಖೆಯವರು ಚಂದನಹೊಸಹಳ್ಳಿ ಗ್ರಾಮದ (ಶಿವಗಂಗೆ ರಸ್ತೆ) ಹಳ್ಳಿಮನೆ ಮಿಲ್ಟ್ರಿ ಹೊಟೇಲ್, ಚೌಡೇಶ್ವರಿ ಡಾಬಾ ಫುಡ್ ಕೋರ್ಟ್ ಯಂಟಗಾನಹಳ್ಳಿ, ತೇಜ ಪ್ಯಾಮಿಲಿ ಡಾಬಾ ಎಡೇಹಳ್ಳಿ ಹಾಗೂ ಮಾರುತಿ ಡಾಬಾ ತಾಳೆಕೆರೆ ಗೇಟ್, ಗೇಟ್-ಇನ್-ಪುಡ್ ಕೋರ್ಟ್ ಮೇಲೆ ದಾಳಿ ಮಾಡಿ ಅನಧಿಕೃತವಾಗಿ ಶೇಖರಿಸಲ್ಪಟ್ಟ ಮದ್ಯವನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಾಲೂಕು ತಹಸೀಲ್ದಾರ್ ಡಾ.ಗೀತಾ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement