ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಪರ ಸಚಿವ ರಾಮಲಿಂಗಾರೆಡ್ಡಿ ಬಿರುಸಿನ ಪ್ರಚಾರ

Rashmi Kasaragodu
Updated On : 28 Mar 2014, 2:27 am

ಆನೇಕಲ್ಲು: ಬ್ರಿಟಿಷರ ವಿರುದ್ಧ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾಂಗ್ರೆಸ್ನ ಸಾವಿರಾರು ನೇತಾರರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನೇತಾರರು ಅಸಲಿ ದೇಶಭಕ್ತರು ಎಂದು ಕರೆಯಲು ಹೆಮ್ಮೆಯಾಗುತ್ತದೆ ಎಂದು ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಅವರು ತಾಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಕೈಗಾರಿಕಾ ಕ್ರಾಂತಿ, ಆಹಾರ ಕ್ರಾಂತಿ, ಪಂಚಾವಾರ್ಷಿಕ ಯೋಜನೆಗಳ ಮೂಲಕ ಹಂತ ಹಂತವಾಗಿ ದೇಶವನ್ನು ಮುನ್ನಡೆಸಿದ  ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು ಎಂದರು. ಡಿ.ಕೆ. ಸುರೇಶ್ಗೆ ಮತ ನೀಡಬೇಕೆಂದು ಮನವಿ ಮಾಡಿದರು. ಶಾಸಕ ಬಿ.ಶಿವಣ್ಣ ಮಾತನಾಡಿ ಆನೇಕಲ್ ತಾಲೂಕಿಗೆ ತಾತಗುಣಿ ಎಸ್ಟೇಟ್ನಿಂದ ಹಾಗೂ ಜಂಬೂ ಸವಾರಿ ದಿಣ್ಣೆಯಿಂದ 15 ಎಂಎಲ್ಡಿ ನೀರು ತರಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯವಾಗಿದೆ ಎಂದರು.
ಅಭ್ಯರ್ಥಿ ಸುರೇಶ್ ಮತಯಾಚನೆ ಮಾಡಿ ತಾಲೂಕಿನಲ್ಲಿ ಅಂತರ್ಜಲ ಕುಸಿದಿದ್ದು ಫ್ಲೋರೈಡ್ಯುಕ್ತ ನೀರಿನ  ಬದಲು ಸಂಸ್ಕರಿಸಿದ ಶುದ್ಧ ಕುಡಿಯುವ ನೀರು ಘಟಕ ತೆರೆಯಲಾಗಿದೆ. ಆನೇಕಲ್ ಚಂದಾಪುರ ಜೋಡಿ ರಸ್ತೆ ಅನುಮೋದನೆ ಪಡೆದಿದೆ. 6 ತಿಂಗಳ ಅಲ್ಪ ಅವಧಿಯಲ್ಲಿ ಕ್ಷೇತ್ರದ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದು ಹೊಸ ಯೋಜನೆಗಳನ್ನು ತರಲು ಆಶೀರ್ವಾದ ನೀಡಬೇಕೆಂದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಆರ್.ಕೆ. ರಮೇಶ್, ಸುಬ್ಬಣ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement