ಶೈಕ್ಷಣಿಕ ಪ್ರಗತಿಗೆ ಸಂಪನ್ಮೂಲ ಅಧಿಕಾರಿಗಳ ಕೊಡುಗೆ ಅಮೂಲ್ಯ
ಕನಕಪುರ: ಕನಕಪುರ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಸಂಪನ್ಮೂಲ ಅಧಿಕಾರಿಗಳ ಕೊಡುಗೆ ಅಮೂಲ್ಯವಾದದ್ದು, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದ ತಾಲೂಕು ಇಂದು ಹೆಚ್ಚಿನ ಪ್ರಗತಿ ಸಾಧಿಸಲು, ಖಾಸಗೀ ಶಾಲೆಗಳೊಂದಿಗೆ ಸ್ಪರ್ಧಿಸಲು ಸಿಆರ್ಪಿಗಳು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್ ಹೇಳಿದ್ದಾರೆ.
ಅವರು ಇಲ್ಲಿನ ಶಿಕ್ಷಕರ ಭವನದಲ್ಲಿ 3 ವರ್ಷಗಳ ಸಂಪನ್ಮೂಲ ಅಧಿಕಾರಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುತ್ತಾ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಸಿಆರ್ಪಿ ಮಂಜುನಾಥ್,ಚಂದ್ರಾವತಿ, ಶೋಭಾ, ವೆಂಕಟೇಶ್, ಚಿಕ್ಕಬಸವಯ್ಯ, ಲಿಂಗರಾಜು ಹಾಗೂ ಶಿವರಾಮು ಅವರನ್ನು ಸನ್ಮಾನಿಸಲಾಯಿತು.
ಮುಖ್ಯಅತಿಥಿಗಳಾಗಿ ಡಯಟ್ ಉಪನ್ಯಾಸಕ ಭೀಮಾನಾಯಕ್, ಅಕ್ಷರ ದಾಸೋಹ ನಿರ್ದೇಶಕ ರಾಜು ಪಾಲ್ಗೊಂಡಿದ್ದರು.