ಚುನಾವಣಾ ವೆಚ್ಚದ ಮೇಲೆ ಹೆಚ್ಚಿನ ನಿಗಾ ಇಡಿ
ಮಾಗಡಿ: ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಎಂದರೆ ಚುನಾವಣಾ ವೆಚ್ಚದ ಮೇಲೆ ಹೆಚ್ಚಿನ ನಿಗಾ ಇಡುವುದು ಎಂದು ಚುನಾವಣಾ ವೀಕ್ಷಕರಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿರುವ ವೀಕ್ಷಕ ಪ್ರಕಾಶ್ ಹೇಳಿದ್ದಾರೆ. ಮಾಗಡಿ ತಾಲೂಕು ಕಚೇರಿ ಸಭಾಂಗಣದಲ್ಲಿನ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಹಾಯಕ ವೆಚ್ಚ ವೀಕ್ಷಕಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ವೆಚ್ಚದ ಮೇಲೆ ಹೆಚ್ಚಿನ ನಿಗಾ ಇಡುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಪೂರಕವಾಗಿರುತ್ತದೆ ಎಂದರು.ನಮ್ಮ ಯೋಚನೆಗೂ ಮೀರಿ ಹಲವು ವೆಚ್ಚಗಳು ಘಟಿಸುವ ಸಂಭವವಿದ್ದು, ಪ್ರತಿಯೊಂದು ಸಮಿತಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.