ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಾಳು ಬಾವಿಗೆ ಬಿದ್ದ ಕರಡಿ ಎತ್ತಲು ಹರಸಾಹಸ

Rashmi Kasaragodu
Updated On : 29 Mar 2014, 2:23 am

ಮಾಗಡಿ: ಪಾರಂಗ ಶಾಲೆ ಎದುರಿಗೆ ಇರುವ ಪಾಳು ಬಾವಿಗೆ ಬಿದ್ದ ಕರಡಿಯೊಂದನ್ನು ಬಾವಿಯಿಂದ ಮೇಲೆತ್ತಲು ಅರಣ್ಯ ಇಲಾಖೆಯ 5 ಮಂದಿ ಸಿಬ್ಬಂದಿಗಳು ಸತತ 10 ಗಂಟೆ ಪ್ರಯತ್ನಿಸಿದರೂ ಕರಡಿಯನ್ನು ರಕ್ಷಿಸಲು ಇನ್ನೂ ಸಾಧ್ಯವಾಗಿಲ್ಲ.
ಇಲ್ಲಿನ ತೊರೆಪಾಳ್ಯದ ಬಳಿ ಇರುವ ಪಾರಂಗ ಶಾಲೆಯ ಎದುರಿಗೆ ಇರುವ ಪಾಳು ಬಾವಿಗೆ ಶುಕ್ರವಾರ ಮುಂಜಾನೆ ಆಕಸ್ಮಿಕವಾಗಿ ಕರಡಿಯೊಂದು ಬಿದ್ದಿದೆ.  ಬಾವಿಯಲ್ಲಿ ಅಲ್ಪಸ್ವಲ್ಪ ನೀರಿದ್ದು, ನೀರಿನಲ್ಲಿರುವ ಕರಡಿಯನ್ನು ಕಂಡ ಗ್ರಾಮಸ್ಥರು ಕರಡಿ ರಕ್ಷಿಸುವಂತೆ ಮುಂಜಾನೆಯೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ಸಕಾಲಕ್ಕೆ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಆಗಮಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ  ಗ್ರಾಮಸ್ಥರು ಅರಣ್ಯ ಇಲಾಖೆ ಮುಂಭಾಗ ಜಮಾಯಿಸಿ ಕರಡಿ ರಕ್ಷಿಸುವಂತೆ ದಿಢೀರ್ ಪ್ರತಿಭಟನಾ ಧರಣಿ ನಡೆಸಿದರು. ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ವಲಯ ಅರಣ್ಯಾಧಿಕಾರಿ ಕೆ.ಎನ್. ಕೆಂಪರಾಜು ಮಾರ್ಗದರ್ಶನದಲ್ಲಿ ಕೂಡಲೆ ಕಾರ್ಯಪ್ರವೃತ್ತರಾಗಿ ಬಲೆಯ ಮೂಲಕ ಕರಡಿಯನ್ನು ಮೇಲೆತ್ತಲು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆವಿಗೂ ಯತ್ನಿಸಿದರೂ ಪ್ರಯೋಜವಾಗಿಲ್ಲ. ಕರಡಿ ನೋಡಲು ಹೆಚ್ಚು ಜನ ಜಮಾಯಿಸಿದ್ದರಿಂದ ಕರಡಿ ಗಾಬರಿಗೊಂಡಿದೆ. ರಾತ್ರಿಯವರೆವಿಗೂ ಕಾಯಬೇಕಿದೆ. ರಾತ್ರಿಯಾದ ನಂತರ ಬಾವಿಗೆ ಏಣಿ ಹಾಕಲಾಗುವುದು. ಜತೆಗೆ ಕರಡಿಗೆ ಅಗತ್ಯವಾದ ಹಲಸಿನ ಹಣ್ಣು, ಬಾಳೆಹಣ್ಣು ಇತರೆ ಆಹಾರ ಪೂರೈಕೆ ಮಾಡುವ ಮೂಲಕ ಕರಡಿಯನ್ನು ಮೇಲಕ್ಕೆ ಬರುವಂತೆ ನೋಡಿಕೊಂಡು ಸುರಕ್ಷಿತವಾಗಿ ಕಾಡಿಗೆ ಬಿಡುವ ಪ್ರಯತ್ನ ನಡೆದಿದೆ ಎಂದು ವಲಯ ಅರಣ್ಯಾ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement