ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರತಿಯೊಬ್ಬರೂ ಮತದಾನ ಮಾಡಿ

Rashmi Kasaragodu
Updated On : 29 Mar 2014, 2:23 am

ಸೂಲಿಬೆಲೆ: ಹೊಸಕೋಟೆ ತಾಲೂಕಿನಲ್ಲಿರುವ 18ವರ್ಷಕ್ಕೂ ಮೇಲ್ಪಟ್ಟು ಮತದಾರ ಪಟ್ಟಯಲ್ಲಿ ನೋಂದಾಯಿಸಿಕೊಂಡು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಸದೃಢತೆಗೆ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಜಾಗೃತಿ ಜಾಥಾ ನಡೆಸುವ ಮುಖೇನ  ಅರಿವು ಮೂಡಿಸಿದರು. ಹೊಸಕೋಟೆ ಸರ್ಕಾರಿ ಶಾಲೆ ಆವರಣದಿಂದ ನೂರಾರು ಆಶಾ ಕಾರ್ಯಕರ್ತರೊಂದಿಗೆ ಜಾಗೃತಿ ಜಾಥಾ ಹೊರಟ ಸಹಾಯಕ ಚುನಾವಣಾಧಿಕಾರಿ ನಟರಾಜ್, ತಹಸೀಲ್ದಾರ್ ಕುಮಾರಸ್ವಾಮಿ, ಕಾರ್ಯನಿರ್ವಹಣಾಧಿಕಾರಿ  ದ್ಯಾವಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಶಕೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜಿನಪ್ಪ ಮೊದಲಾದ ಅಧಿಕಾರಿಗಳು ಆಶಾ ಕಾರ್ಯಕರ್ತರೊಂದಿಗೆ ಮತದಾನದ ಬಗ್ಗೆ ಘೋಷಣೆ ವಾಕ್ಯಗಳೊಂದಿಗೆ ಮಿನಿ ವಿಧಾನಸೌಧದವರಿಗೆ ಜಾಥಾ ನಡೆಸಿದರು.



ಜೆಡಿಎಸ್ ಗೆಲ್ಲಿಸಿ: ಶಾಸಕ ಮಂಜುನಾಥಗೌಡ
ಬಂಗಾರಪೇಟೆ: ಈ ಬಾರಿ ಜೆಡಿಎಸ್‌ನ್ನು ಗೆಲ್ಲಿಸ ಬೇಕು ಎಂದು ಮಾಲೂರು ಶಾಸಕ ಮಂಜುನಾಥಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. ಪಟ್ಟಣದ ಹೊರವಲಯದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಕಳೆದ 6 ಬಾರಿ ಕೆ.ಹೆಚ್. ಮುನಿಯಪ್ಪ ಜಯಗಳಿಸಿದ್ದರೂ ಕ್ಷೇತ್ರದಲ್ಲಿ ಮಾತ್ರ ಯಾವುದೇ ಬದಲಾವಣೆಯ ಗಾಳಿ ಬೀಸಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಈಗಾಗಲೇ ದೇಶದ ಜನರು ಎರಡು ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತಿದ್ದಾರೆ ಎಂದರು. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿದರು. ವೆಂಕಟಶಿವಾರೆಡ್ಡಿ ಶ್ರೀಕೃಷ್ಣ, ಡಿ.ಎಲ್. ನಾಗರಾಜ್ ಸೇರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement