ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಫ್ರಿಕನ್ ಕ್ಯಾಟ್ಫಿಷ್ ಹೊಂಡ ತೆರವು ಕಾರ್ಯಾಚರಣೆ

Rashmi Kasaragodu
Updated On : 30 Mar 2014, 2:26 am

ಸೂಲಿಬೆಲೆ: ಪಟ್ಟಣದ ಸುತ್ತಮುತ್ತ ಸಾಕಣೆ ಮಾಡುತ್ತಿರುವ ನಿಷೇಧಿತ ಆಫ್ರಿಕನ್ ಕ್ಯಾಟ್ಫಿಷ್ ಹೊಂಡಗಳ ತೆರೆವಿಗೆ ಶನಿವಾರ ದಿಢೀರೆಂದು ಆಗಮಿಸಿದ ತಹಸೀಲ್ದಾರ್ ಕುಮಾರಸ್ವಾಮಿ ನೇತೃತ್ವದ ರೆವಿನ್ಯೂ ಅಧಿಕಾರಗಳ ತಂಡ 7ಕ್ಕೂ ಹೆಚ್ಚು ಹೊಂಡಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವು ಮಾಡಿತು. ಈ ವೇಳೆ ತೆರೆವಿಗೆ ವಿರೋಧ ವ್ಯಕ್ತಪಡಿಸಿದ ಫಿಷ್ ಸಾಕಣೆದಾರರು ಅಧಿಕಾರಗಳ ಮೇಲೆ ಮುಗಿ ಬೀಳಲು ಯತ್ನಿಸಿದಾಗ ಮಾತಿನ ಚಕಮುಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಗತ್ಯ ಪೊಲೀಸ್  ಸಿಬ್ಬಂದಿ ಇಲ್ಲದ ಕಾರಣ ಹೊಂಡದಲ್ಲಿರುವ ಮೀನು ತೆಗೆದುಕೊಳ್ಳಲು ಕಾಲಾವಕಾಶ ನೀಡಿ ಕಾರ್ಯಾಚರಣೆ ಮೊಟಕುಗೊಳಿಸಿ ವಾಪಸಾದರು. ಪಟ್ಟಣದ ಸುತ್ತ ನಿಷೇಧಿತ ಕ್ಯಾಟ್ಫಿಷ್ ಹೊಂಡಗಳನ್ನು ಕೆಲ ತಿಂಗಳ ಹಿಂದೇ ಜಿಲ್ಲಾಧಿಕಾರಿಗಳೇ ಮುಂದೆ ನಿಂತು ತೆರೆವು ಮಾಡಿ ಮುಂದಿನ ದಿನಗಳಲ್ಲಿ ಸಾಕಣೆ ಮಾಡದಂತೆ ಎಚ್ಚರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement