ಕಿಕ್ಕೇರಿಯಲ್ಲಿ ಪುಟ್ಟರಾಜು ಪ್ರಚಾರ ಸಭೆ
ಕಿಕ್ಕೇರಿ: ಹೋರಾಟ ಜನ್ಮ ಸಿದ್ಧ ಹಕ್ಕಾಗಿದ್ದು ಜನತೆಯ ಋಣ ತೀರಿಸಲು ಸಂಸತ್ಗೆ ತಮ್ಮನ್ನು ಆಯ್ಕೆ ಮಾಡಿ ಎಂದು ಜೆಡಿಎಸ್ ಲೋಕಸಭಾ ಅಭ್ಯರ್ಥಿ ಪುಟ್ಟರಾಜು ಕೋರಿದರು. ಪಟ್ಟಣದ ಹಳೆ ಬಸ್ನಿಲ್ದಾಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ಸಮಸ್ಯೆ ಮೈಸೂರು ಸೀಮೆ ಜನರಿಗೆ ಕಣ್ಣೀರಿನ ಸಮಸ್ಯೆಯಾಗಿದೆ. ಬೆಳೆ ಬೆಳೆಯುವುದಿರಲಿ ಕುಡಿಯಲೇ ನೀರು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಕಾಂಗ್ರೆಸ್ನಲ್ಲಿ ಒಳ ಕಚ್ಚಾಟ ತಾರಕಕ್ಕೇರಿದೆ. ರೈತರಿಗೆ ಬರೆಯ ಮೇಲೆ ಬರೆ ಎಳೆಯುತ್ತಿದೆ ಎಂದು ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ಮಾಜಿ ಸಂಸದ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಸಿ.ನಾರಾಯಣಗೌಡ ಮಾತನಾಡಿದರು. ಇದೇ ವೇಳೆ ದೇವರಹಳ್ಳಿ ನಾಗಣ್ಣ ಮೊದಲಾದವರು ಜೆಡಿಎಸ್ ಸೇರಿದರು. ಶಾಸಕ ಕೆ.ಸಿ.ನಾರಾಯಣಗೌಡ, ಜಿಪಂ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮುಖಂಡ ಬಿ.ಎಲ್.ದೇವರಾಜು, ಬಿ.ಪ್ರಕಾಶ್, ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಎಂ.ಡಿ.ಹರೀಶ್, ವಿ.ಮಂಜೇಗೌಡ, ಈರಪ್ಪ, ಎಲ್.ಪಿ.ನಂಜಪ್ಪ, ಮಂಜೇಗೌಡ, ಊಗಿನಹಳ್ಳಿ ಮುರುಳೀಧರ್ ಮೊದಲಾದವರಿದ್ದರು.