ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಾಸ್ಯಕ್ಕೆ ನೀತಿಸಂಹಿತೆ ವಿಘ್ನ ಕಾರ್ಯಕ್ರಮ ರದ್ದು

Rashmi Kasaragodu
Updated On : 30 Mar 2014, 2:26 am

ದೊಡ್ಡಬಳ್ಳಾಪುರ:: ದೊಡ್ಡಬಳ್ಳಾಪುರ ಮಿತ್ರ ಬಳಗ ನೇತೃತ್ವದಲ್ಲಿ ಪ್ರತಿವರ್ಷ ಯುಗಾದಿ ಹಬ್ಬದ ದಿನದಂದು ಸಂಜೆ ಇಲ್ಲಿನ ಎಂಎಬಿಎಲ್ ಆವರಣದಲ್ಲಿ ನಡೆಯುತ್ತಿದ್ದ ಹಾಸ್ಯ-ಲಾಸ್ಯ ಸಾಂಸ್ಕೃತಿಕ ಹಾಗೂ ವಿನೋದ ಕಾರ್ಯಕ್ರಮಗಳಿಗೆ ಈ ಬಾರಿ ಲೋಕಸಭಾ ಚುನಾವಣೆ ನೀತಿ ಸಂಹಿತೆಯ ವಿಘ್ನ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಕರು ಈ ಬಾರಿಯ ಕಾರ್ಯಕ್ರಮವನ್ನು ರದ್ದು ಮಾಡಿ ಪ್ರಕಟಣೆ ನೀಡಿದ್ದಾರೆ. ಅಪ್ಪಟ ಸಾಂಸ್ಕೃತಿಕ ಹಿನ್ನೆಲೆಯ ಕಾರ್ಯಕ್ರಮವಾಗಿದ್ದರೂ ಕೂಡ ಕೆಲ ಸ್ಥಳೀಯ ಹಂತದ ರಾಜಕೀಯ ಪಕ್ಷಗಳ ಜನರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಹಲವು ಹಂತಗಳಲ್ಲಿ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಆಯೋಜನೆ ಕೂಡ ಕಷ್ಟ ಸಾಧ್ಯ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕೂಡ ಈಗಾಗಲೇ ಎಲ್ಲರ ಕೈಸೇರಿತ್ತು. ಆದರೆ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement