ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂತರ ಜಿಲ್ಲಾ ಜಾನಪದ ಸಂಜೆ ಕಾರ್ಯಕ್ರಮ

Rashmi Kasaragodu
Updated On : 31 Mar 2014, 1:13 am

ಕನಕಪುರ: ರಾಮನಗರ, ಚಾಮರಾಜನಗರ ಜಿಲ್ಲಾ ಕಸಾಪ ಹಾಗೂ ಕನಕಪುರ ಕನ್ನಡಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುವ ಹಾದಿಯ ರಂಗಸ್ವಾಮಿ ಒಡ್ಡು ಸ್ಥಳದಲ್ಲಿ ಅಂತರ ಜಿಲ್ಲಾ ಜಾನಪದ ಸಂಕಲನ ಹಾಗೂ ಜಾನಪದ ಸಂಜೆ ಕಾರ್ಯಕ್ರಮವು ಸಾವಿರಾರು ಕಾಲ್ನಡಿಗೆ ಯಾತ್ರಿಗಳ ಸಮ್ಮುಖದಲ್ಲಿ ನಡೆಯಿತು.
ಸಾಲೂರು ಮಠದ ಶ್ರೀ ಇಮ್ಮಡಿ ಮಹದೇವಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕನಕಪುರ ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ಅಡಕಮುದ್ರಿಕೆ ಬಿಡುಗಡೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಜಾನಪದ ತಜ್ಞ ಡಾ.ಚಕ್ಕೆರೆ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು. ಡಾ.ಚಕ್ಕೆರೆ ಶಿವಶಂಕರ್ ಮಾತನಾಡಿ ಪವಾಡ ಪುರುಷ ಮಲೆ ಮಹದೇಶ್ವರರು ನಡೆದುಬಂದ ಹಾದಿ, ಸಮಾಜದ ಪರಿವರ್ತನೆಗಾಗಿ ನೀಡಿದ ಮಹತ್ತರ ಕೊಡುಗೆಯನ್ನು ವಿವರಿಸಿ ಅವರ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ಬಿಡಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಚಾಲಕ ಚೌ.ಪು.ಪುಟ್ಟಸ್ವಾಮಿ, ಕೋಶಾಧ್ಯಕ್ಷ ಮಹೇಶ್, ಪ್ರೊ.ಕೆಂಪೇಗೌಡ, ತೋಟದಮನೆ ಕೃಷ್ಣೇಗೌಡ, ಕೊಳ್ಳೇಗಾಲ ಕಸಾಪ ಅಧ್ಯಕ್ಷ ಚಿಕ್ಕಬಸವಯ್ಯ, ಜಾನಪದ ಕಲಾವಿದರಾದ ಪೊನ್ನಾಚಿ ಮಹದೇವಸ್ವಾಮಿ, ಮಹದೇವಯ್ಯ ಪಾಲ್ಗೊಂಡಿದ್ದರು.


ಕಲೆ ನಿಂತ ನೀರಲ್ಲ: ಚಿತ್ರನಟಿ ಮಾಲತಿ ಮೈಸೂರು


ನೆಲಮಂಗಲ: ಕಲೆಯೆಂಬುದು ನಿಂತ ನೀರಲ್ಲ ಬದಲಿಗೆ ಮನುಷ್ಯತ್ವದೊಂದಿಗೆ ವ್ಯಕ್ತಿತ್ವವನ್ನು ರೂಪಿಸುವ ಮಹಾಮನೆ ಎಂದು ಹಿರಿಯ ರಂಗಭೂಮಿ ಮತ್ತು ಚಿತ್ರನಟಿ ಮಾಲತಿ ಮೈಸೂರು ಅವರು ತಿಳಿಸಿದರು.
ಅವರು ಭಾನುವಾರ ಪಟ್ಟಣದ ದಿವ್ಯಜ್ಯೋತಿ ಕಲಾಕೇಂದ್ರ ಮತ್ತು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಆಶ್ರಯದಲ್ಲಿ 2 ದಿನಗಳ ಸಾಂಸ್ಕೃತಿಕ ಹಾಗೂ ರಂಗಕಲಾ ನಾಟಕ ಪ್ರದರ್ಶನದಲ್ಲಿ ಲೈಫ್ ಒನ್ ಮೋರ್ ಚಾನ್ಸ್ ಎಂಬ ವಿನೂತನ ನಾಟಕವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳು ಜನರ ಬದುಕಿನ ಪರಂಪರೆ ಸಂಸ್ಕೃತಿಯ ಪ್ರತೀಕ ಎಂದರು.
ಮುಖ್ಯ ಅತಿಥಿಯಾಗಿದ್ದ ಜಾನಪದ ತಜ್ಞ ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಸಮಾಜದ ಓರೆಕೋರೆಗಳನ್ನು ಪ್ರತಿಫಲಿಸಿ ಸ್ವಾಥ್ಯವನ್ನು ಕಾಯುವ ಕಾಯಕವನ್ನು ನಾಟಕಗಳು ನಿರ್ವಹಿಸುತ್ತವೆ ಎಂದರು. ಅತಿಥಿಯಾಗಿದ್ದ  ಚಲನಚಿತ್ರ ಕಲಾವಿದ ಶಂಖನಾದ ಆಂಜನಪ್ಪ ಮಾತನಾಡಿ, ವಿಶೇಷವಾಗಿ ಗೋಚರಿಸುವ ಜನಪದರ ಕಲಾಪ್ರಕಾರಗಳು ಗ್ರಾಮೀಣ ಚಿತ್ರಣವನ್ನು ಸಾಂಸ್ಕೃತಿಕವಾಗಿ ರಕ್ಷಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕಿ ಡಾ.ಬಿ.ಪುಷ್ಪ ಮಾತನಾಡಿದರು.
ದಿವ್ಯಜ್ಯೋತಿ ವಿದ್ಯಾ ಸಂಸ್ಥೆಯ ವಿಜಯಾಕೃಷ್ಣಮೂರ್ತಿ, ತಾಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆ.ವಿ.ರುದ್ರಪ್ಪ, ಎಸ್.ಶ್ರೀನಿವಾಸ್, ಸಿ.ಎಸ್. ಪ್ರಕಾಶ್, ರೇಣುಕಾರಾದ್ಯ, ಬೈಲಪ್ಪ, ಬಿ.ಜಿ.ಕೃಷ್ಣಯ್ಯ, ಬೂದಿಹಾಲ್‌ಕಿಟ್ಟಿ, ಪೈಲ್ವಾನ್ ಶಿವಣ್ಣ ಇತರರು ಇದ್ದರು. ವೆಂಕಟೇಶ್. ಆರ್. ಚೌತಾಯಿ ಸಂಘಟಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement