ಎಂ.ಬಿ.ಟಿ.ರಾಮಕೃಷ್ಣಯ್ಯ ಜೆಡಿಎಸ್ ಅಧ್ಯಕ್ಷ
ನೆಲಮಂಗಲ: ತಾಲೂಕು ಜಾತ್ಯತೀತ ಜನತಾದಳದ ನೂತನ ಅಧ್ಯಕ್ಷರಾಗಿ ಎಂ.ಬಿ.ಟಿ.ರಾಮಕೃಷ್ಣಯ್ಯ ಅವರು ಆಯ್ಕೆಗೊಂಡಿದ್ದಾರೆ ಎಂದು ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಆದೇಶ ನೀಡಿದ್ದಾರೆ. ಕಾರ್ಯದರ್ಶಿಯನ್ನಾಗಿ ಎನ್.ಪಿ. ಹೇಮಂತ್ಕುಮಾರ್, ಖಜಾಂಜಿಯಾಗಿ ಶಿವಗಂಗೆಯ ಹೊನ್ನಗಂಗಶೆಟ್ಟಿ, ಉಪಾಧ್ಯಕ್ಷರಾಗಿ ಮಹಿಮಣ್ಣ ಅವರನ್ನು ನೇಮಿಸಿ ಪಕ್ಷದ ಜವಾಬ್ದಾರಿ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ. ನೂತನವಾಗಿ ಆಯ್ಕೆಗೊಂಡ ತಾಲೂಕು ಜೆಡಿಎಸ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಪುರಸಭೆ ಅಧ್ಯಕ್ಷ ಎಂ. ನಾರಾಯಣ್, ತಾ.ಪಂ.ಮಾಜಿ ಅಧ್ಯಕ್ಷ ಕೇಶವಮೂರ್ತಿ, ಲಕ್ಷ್ಮೀನಾರಾಯಣ್, ಪುಟ್ಟಗಂಗಯ್ಯ, ಮುಖಂಡರಾದ ಗಂಗಣ್ಣ, ಎ. ಪಿಳ್ಳಪ್ಪ, ತಿಮ್ಮರಾಜು, ಶಾಂತಕುಮಾರ್ ಅಭಿನಂದಿಸಿದರು.