ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

35 ದಲಿತ ಕುಟುಂಬಗಳಿಗೆ ವಂಚನೆ

Mainashree
Updated On : 2 May 2014, 12:59 pm

ಸೂಲಿಬೆಲೆ: ವಾಸವಿರುವ ನಿವೇಶನಗಳ ಮಂಜೂರಾತಿ ಹಕ್ಕು ಪತ್ರ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತೇವೆ ಎಂದು ಹೇಳಿಕೊಂಡು ಸಂಘಟನೆಯೊಂದರ ಮುಖಂಡರ ಹಣ ಪಡೆದು 35 ದಲಿತ ಕುಟುಂಬಗಳಿಗೆ ವಂಚನೆ ಮಾಡಿದ್ದಾರೆ ಎಂದು ಕಣ್ಣೂರಹಳ್ಳಿ ದಿನ್ನೆ ಗ್ರಾಮದ ದಲಿತರು ಆರೋಪಿಸಿದ್ದಾರೆ. ಈ ಬಗ್ಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ: ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ದಿನ್ನೆ ಗ್ರಾಮದಲ್ಲಿ ಸುಮಾರು 35 ದಲಿತ ಕುಟುಂಬಗಳು 8-10 ವರ್ಷದಿಂದ ವಾಸವಾಗಿದ್ದು,ಇಲ್ಲಿನ ಮನೆಗಳಿಗೆ  ಭೂಮಿ ಮಂಜೂರಾತಿ ಹಕ್ಕುಪತ್ರ, ವಿದ್ಯುತ್, ನೀರು ಸೌಲಭ್ಯ, ಚರಂಡಿಯಂಥ ಯಾವುದೇ ಸೌಲಭ್ಯಗಳು ಇಲ್ಲ.ಇವುಗಳನ್ನು ಕಲ್ಪಿಸಿಕೊಡಿ ಎಂದು ಅನೇಕ ಬಾರಿ ಇಲ್ಲಿನ ನಿವಾಸಿಗಳು ಕೋರಿಕೆ ಸಲ್ಲಿಸಿ, ಪ್ರತಿಭಟನೆಗಳು ನಡೆಸಿದರೂ ತಾಲೂಕು ಆಡಳಿತ ಮಾತ್ರ ಕಿಂಚಿತ್ತೂ ಗಮನ ಹರಿಸಿಲ್ಲ. ಈ ಮಧ್ಯೆ ಸಂಘಟನೆಯೊಂದರ ಮುಖಂಡರು ನಿಮಗೆ ಹಕ್ಕುಪತ್ರ ಕೊಡಿಸುತ್ತೇವೆ ಎಂದೇಳಿ ಪ್ರತಿ ಕುಟುಂಬದಿಂದ ತಲಾ ಇಂತಿಷ್ಟು ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಏ.30ರಂದು ಗ್ರಾಮದಲ್ಲಿ ದೇಗುಲ ಕಾಮಗಾರಿ ನಡೆಸುತ್ತಿದ್ದಾಗ ಅಲ್ಲಿಗೆ ಬಂದು ಬೆದರಿಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಿ ಎಂದು ಕರ್ನಾಟಕ ಜನಾಂದೋಲನ ಸಂಘಟನೆ ರಾಜ್ಯಾಧ್ಯಕ್ಷ ಮಾರಪ್ಪ ಅವರ ನೇತೃತ್ವದಲ್ಲಿ ಗ್ರಾಮದ ದಲಿತ ಕುಟುಂಬಗಳು ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ.
 ಕಣ್ಣೂರಹಳ್ಳಿ ದಿನ್ನೆಯಲ್ಲಿ ವಾಸವಾಗಿರುವ ಗ್ರಾಮದ ಜನರು ಶೀಟುಗಳಿಂದ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದು, ಇಲ್ಲಿಗೆ ಸಂಪರ್ಕಿಸಲು ಸರಿಯಾದ ರಸ್ತೆಯಿಲ್ಲ. ಮಣ್ಣಿನ ಕಾಲು ದಾರಿಯಿದೆ. ಚರಂಡಿ ವ್ಯವಸ್ಥೆ ಇಲ್ಲ. ವಿದ್ಯುತ್ ಇಲ್ಲವೇ ಇಲ್ಲ. ಇವರಿಗೆ ಪಡಿತರ ಚೀಟಿಗಳಿವೆ. ಮತದಾನದ ಗುರುತಿನ ಚೀಟಿಗಳಿವೆ. ಆದರೇ ಮೂಲ ಸಮಸ್ಯೆಗಳನ್ನು ಕಲ್ಪಿಸುವಲ್ಲಿ ಯಾವೊಬ್ಬ ಅಧಿಕಾರಿಯು ಇತ್ತ ಗಮನಹರಿಸುತ್ತಿಲ್ಲ. ಅನೇಕ ಬಾರಿ ಪ್ರತಿಭಟನೆಗಳಾಗಿವೆ. ಪ್ರಯೋಜನೆ ಮಾತ್ರ ಶೂನ್ಯ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ದಲಿತರಿಗೆ ಅನುಕೂಲ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement