ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಹಿಳಾ, ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಬಸವ ಜಯಂತಿ

Mainashree
Updated On : 3 May 2014, 12:25 pm

ದೇವನಹಳ್ಳಿ : ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ದೇವನಹಳ್ಳಿ ತಾಲೂಕು ಅಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬಸವಜಯಂತಿ ಅಂಗವಾಗಿ ಜಲ ಸಂರಕ್ಷಣಾ ಆಂದೋಲನ ಜಾಗೃತಿ ಸಮಾರಂಭ ಶುಕ್ರವಾರ ಆಯೋಜಿಸಲಾಗಿತ್ತು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ  ಮಾತನಾಡಿ ಹನ್ನೆರಡನೇ ಶತಮಾನದ ಆಗಿನ ಸಮಾಜದಲ್ಲಿ ಅಂಕು ಡೊಂಕುಗಳನ್ನು ವಚನಗಳ ಮೂಲಕ ಸರಿಪಡಿಸುವಂತಹ ಕ್ರಾಂತಿಕಾರಿ ಬದಲಾವಣೆ ಮಾಡಿದ ಮಹಾಪುರುಷ ಬಸವಣ್ಣ ಎಂದರಲ್ಲದೆ ಅವರ ವಚನಗಳು ಸರ್ವಕಾಲಕ್ಕೂ ಅನ್ವಯವಾಗುವಂತಹುದು ಎಂದು ತಿಳಿಸಿ  ಬಯಲು ಸೀಮೆ ಪ್ರದೇಶದಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿದ್ದು ಮೊದಲು ಕೆರೆಗಳ ಪುನಶ್ಚೇತನ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ಬಸವಣ್ಣನವರು ಒಂದು  ಧರ್ಮಕ್ಕೆ ಅಥವ ಜಾತಿಗೆ ಸೀಮಿತರಾಗದೆ ವಿಶ್ವಮಾನವರಾಗಿದ್ದಾರೆ ಎಂದರಲ್ಲದೆ ಅವರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಿಳಿಸಿದರು. ಅಂದಿನ ಅನುಭವ ಮಂಟಪದಲ್ಲಿ ಎಲ್ಲ ಜಾತಿಯವರಿಗೂ ಸಮಾನ ಅವಕಾಶವಿತ್ತು ಎಂದು ತಿಳಿಸಿದರು. ಜಲ ಸಂರಕ್ಷಣಾ ಆಂದೋಲನದ ಬಗ್ಗೆ ಮಾತನಾಡಿ ಜಲದ ಕಣ್ಣುಗಳು ಅಥವಾ ಸೆಲೆಗಳು ತೆರೆಯಬೇಕಾದರೆ ಎಲ್ಲ ಕೆರೆಗಳಲ್ಲಿ ನೀರು ನಿಲ್ಲಿಸುವ ಕೆಲಸ ಆಗಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎ. ಶಿವರಾಮಯ್ಯ, ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸೂರ್ಯಕಲಾ ಮೂರ್ತಿ, ಶರಣೆ ಉಷಾ ಪೂರ್ಣ ಚಂದ್ರ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement