ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮ್‌ದೇವ್ ಗಡಿಪಾರಿಗೆ ಒತ್ತಾಯ

Mainashree
Updated On : 3 May 2014, 12:25 pm

ಕ.ಪ್ರ. ವಾರ್ತೆ, ಆನೇಕಲ್ಲು, ಮೇ 2
 ಬಾಬಾ ರಾಮ್‌ದೇವ್ ಅವರು ದಲಿತರ ಕುರಿತು ಆಡಿದ ಮಾತಿನಿಂದ ಅವರ ವ್ಯಕ್ತಿತ್ವ ಎಂತಹುದು ಎಂಬುದು ಎಲ್ಲರಿಗೂ ಅರ್ಥವಾಗಿದೆ. ಅವರನ್ನು ಗಡೀಪಾರು ಮಾಡಬೇಕು ಎಂದು ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮುನಿಯಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ತಾಲೂಕು ಸಭೆಯಲ್ಲಿ ಮಾತನಾಡಿ ಕೋಮುವಾದ ವಿದೇಶೀ ಆಕ್ರಮಣಕ್ಕಿಂತ ಅಪಾಯಕಾರಿಯಾದುದು. ವಿದೇಶೀ ಆಕ್ರಮಣದಲ್ಲಿ ದೇಶವಾಸಿಗಳು ಒಂದೆಡೆ ಕಲೆತರೆ, ಕೋಮು ದಳ್ಳುರಿ ದೇಶವಾಸಿಗಳಲ್ಲಿ ಅಶಾಂತಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ, ಭಾವೈಕ್ಯತೆಯಲ್ಲಿ ಬಿರುಕು ಮೂಡಿಸುತ್ತದೆ.
 ಅಂತಿಮ ಪರಿಣಾಮ ಅಮಾಯಕ ಜನರು ಬಲಿಪಶುಗಳಾಗಿ ಬಲಿಷ್ಠರು ಬಚಾವಾಗುತ್ತಾರೆ. ಭಾರತವನ್ನು ಪ್ರೀತಿಸುವವರು ಕೋಮುವಾದವನ್ನು ದ್ವೇಷಿಸಬೇಕೆಂದು ಕರೆ ನೀಡಿದ ಅವರು ಕೋಮು ದ್ವೇಷ ಬಿತ್ತುವ ಪಕ್ಷಗಳ ಜನರು, ಧರ್ಮ ಸಂಸ್ಕೃತಿಯ ಕರಾಳ ಮುಖವನ್ನು ಮಾತ್ರ ಪ್ರಚೋದನೆ ಅಂಶವಾಗಿ ಬಳಸುವುದು ಖಂಡನೀಯ ಎಂದರು.
ದೇಶದ ಭದ್ರತೆ ಹಾಗೂ ಭವಿಷ್ಯಕ್ಕೆ ವಿಚ್ಛಿದ್ರಕ್ಕಾಗಿ ಶಕ್ತಿಗಳ ದಮನವಾಗಬೇಕೆಂದು ತಿಳಿಸಿದ ಅವರು ಚುನಾವಣಾ ಆಯೋಗ ಶೀಘ್ರ ಶಿಸ್ತು ಕ್ರಮ ವಹಿಸಬೇಕೆಂದರು.  ಛಲವಾದಿ ಸಭಾದ ಸಮಿತಿಯ ಮಹದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement