ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ: ವ್ಯಕ್ತಿ ಸಾವು
ಹೊಸಕೋಟೆ: ಇಲ್ಲಿನ ಸಂತೇ ಮ್ಯೆದಾನದ ಬಳಿಯ ಮೇಲ್ಸೇತುವೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೆಂಬಳಿಗಾನಹಳ್ಳಿಯ ನಾರಾಯಣಸ್ವಾಮಿ (50) ಮೃಪಟ್ಟಿದ್ದಾರೆ.
ಗ್ರಾಮಕ್ಕೆ ಕುಡಿಯುದ ನೀರು ಬಿಡುವ ಕೆಲಸ ಮಾಡುತ್ತಿದ್ದ ನಾರಾಯಣಸ್ವಾಮಿ ಗ್ರಾಮ ಪಂಚಾಯಿತಿಗೆ ಬೇಕಾದ ನೀರಿನ ಯಾಕ್ಗಳನ್ನು ತರಲು ತನ್ನ ಸ್ನೇಹಿತ ಸುರೇಶ್ ಜತೆ ಬೈಕ್ನಲ್ಲಿ ಹೊಸಕೋಟೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಸಿದೆ. ಬೈಕ್ ಓಡಿಸುತ್ತಿದ್ದ ನಾರಾಯಣಸ್ವಾಮಿಯ ನಿಯಂತ್ರಣ ತಪ್ಪಿ ಬೈಕ್ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ಬೆಂಗಳೂರಿನ ನಿಮಾನ್ಸ್ಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು. ಹಿಂಬದಿ ಸವಾರ ಸುರೇಶ್ಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಇಲ್ಲಿಯ ಎಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.