ನೆರಳೂರಿನಲ್ಲಿ ಸಾಮೂಹಿಕ ಉಪನಯನ
ಆನೇಕಲ್ಲು: ಚಂದಾಪುರದ ಸಹೃದಯ ವಿಪ್ರ ವೃಂದ ತನ್ನ 6ನೆಯ ವಾರ್ಷಿಕೋತ್ಸವ ಅಂಗವಾಗಿ ನೆರಳೂರಿನ ಕಾಶೀ ವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ಧರ್ಮೋಪನಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಎನ್.ಎಸ್. ನಾಗರಾಜ್ ತಿಳಿಸಿದ್ದಾರೆ.
ಜೂ.8 ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಬಯಸುವ ತ್ರಿಮತಸ್ಥ ಬ್ರಾಹ್ಮಣ ವಟುಗಳು ದೂರವಾಣಿ ಸಂಖ್ಯೆ 98802 04064-ನಾಗರಾಜ್, 94480 72863-ಕಿತ್ತಿಗಾನಹಳ್ಳಿ ಸೂರ್ಯನಾರಾಯಣ ದೀಕ್ಷಿತ್, ಅತ್ತಿಬೆಲೆಯ ಸೋಮಶೇಖರ್-98865 13851, ಸಿ. ನಾಗೇಂದ್ರ, ಕೋನಪ್ಪನ ಅಗ್ರಹಾರ-99021 83409 ರವರನ್ನು ಮೇ.25ರೊಳಗೆ ಸಂಪರ್ಕಿಸಲು ಕೋರಿದ್ದಾರೆ.