ಸುಪ್ರೀಂ ತೀರ್ಪಿಗೆ ಸಂಘಟನೆಗಳ ಪ್ರತಿಕ್ರಿಯೆ
ದೊಡ್ಡಬಳ್ಳಾಪುರ: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವುದು ಭಾಷಾ ಮಾಧ್ಯಮ ವಿಚಾರದ ಗೊಂದಲಕ್ಕೆ ಪರಿಹಾರವಲ್ಲ. ಈ ಕುರಿತ ಕಾನೂನು ಹೋರಾಟ ಮುಂದುವರೆಯಬೇಕು ಎಂದು ಇಲ್ಲಿನ ಅನೇಕ ಕನ್ನಡಪರ ಸಂಘಟನೆಗಳು ಹೇಳಿವೆ. ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದಿರುವ ಸಂವಿಧಾನ ಪೀಠ, ತಂದೆ-ತಾಯಿ ಮಾತನಾಡುವ ಭಾಷೆಯೇ ಮಾತೃಭಾಷೆ, ಭಾಷೆಯನ್ನು ಹೇರುವ ಅಧಿಕಾರ ಸರ್ಕಾರಕ್ಕೆ ಇಲ್ಲ ಮತ್ತು ರಾಜ್ಯ ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದ್ದು, ಮೂಲಭೂತ ಹಕ್ಕಿನ ಉಲ್ಲಂಘನೆ. ಭಾಷೆಯನ್ನು ನಿರ್ಧರಿಸುವ ಅಧಿಕಾರ ಮಗು, ಪೋಷಕರಿಗೆ ಇದೆ ಎಂದು ಹೇಳಿದೆ.