ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಿಯುಸಿ: ಜಿಲ್ಲೆಗೆ ಮತ್ತೆ ಹಿನ್ನಡೆ

Rashmi Kasaragodu
Updated On : 9 May 2014, 12:57 pm

ವಿಶೇಷ ವರದಿ
ರಾಮನಗರ: ರಾಜ್ಯ ರಾಜಧಾನಿ ಮಗ್ಗುಲಲ್ಲೇ ಇರುವ ರಾಮನಗರ ಜಿಲ್ಲೆಯು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವರ್ಷದಿಂದ ವರ್ಷಕ್ಕೆ ಹಿನ್ನಡೆ ಕಾಣುತ್ತಲೇ ಇದೆ. ಕಳೆದ ಬಾರಿ 17ನೇ ಸ್ಥಾನದಲ್ಲಿದ್ದ ಜಿಲ್ಲೆಯು ಪ್ರಸಕ್ತ ಬಾರಿ 22ನೇ ಸ್ಥಾನಕ್ಕೆ ಕುಸಿದಿದೆ.
ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕಳೆದ ಶೈಕ್ಷಣಿಕ ವರ್ಷಾರಂಭದಿಂದಲೇ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಹಮ್ಮಿಕೊಂಡ ನಾನಾ ಕಾರ್ಯಕ್ರಮಗಳು ಫಲಪ್ರದವಾಗಲಿಲ್ಲ ಎನ್ನುವುದಕ್ಕೆ ಫಲಿತಾಂಶದಲ್ಲಿ ಕಂಡಿರುವ ಕುಸಿತ ಸಾಕ್ಷಿಯಾಗಿದೆ.
ಹಿಮ್ಮುಖವಾದ ಫಲಿತಾಂಶ: ರಾಮನಗರ ಜಿಲ್ಲೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 2011-12ನೇ ಸಾಲಿನಲ್ಲಿ ಶೇಕಡ 56.79ರಷ್ಟು ಫಲಿತಾಂಶದೊಂದಿಗೆ 15ನೇ ಸ್ಥಾನದಲ್ಲಿತ್ತು. ನಂತರದ ವರ್ಷದಲ್ಲಿ ಅಂದರೆ 2012-13ನೇ ಸಾಲಿನಲ್ಲಿ ತೇರ್ಗಡೆ ಪ್ರಮಾಣ ಶೇಕಡ 65.94ಕ್ಕೆ ಹೆಚ್ಚಳವಾಯಿತಾದರೂ 17ನೇ ಸ್ಥಾನಕ್ಕೆ ಕುಸಿದಿತ್ತು.
ಕೆಲ ಜಿಲ್ಲೆಗಳು ಫಲಿತಾಂಶ ಪ್ರಮಾಣ ಮತ್ತು ಸ್ಥಾನದಲ್ಲಿ ಮೇಲೇರಿದ್ದರೆ, ರಾಮನಗರ ಜಿಲ್ಲೆಯಲ್ಲಿ ವ್ಯತಿರಿಕ್ತವಾಗಿದೆ. ಈ ಜಿಲ್ಲೆ ಹಿಮ್ಮುಖವಾಗಿ ಸಾಗುತ್ತಿದೆ. ಪ್ರಸಕ್ತ 2013-14ನೇ ಸಾಲಿನಲ್ಲಿ ಶೇ.53.34ರಷ್ಟು ಫಲಿತಾಂಶ ಕಂಡಿರುವ ಜಿಲ್ಲೆ 22ನೇ ಸ್ಥಾನಕ್ಕೆಳಿದಿರುವುದು ವಿಪರ್ಯಾಸದ ಸಂಗತಿ.
ಕೈಕೊಟ್ಟ ಪ್ರಯೋಗ: ಮಧ್ಯಂತರ ಪರೀಕ್ಷೆ ಬಳಿಕ ಸರಾಸರಿಗಿಂತ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರ್ತಿಸಿ, ತಲಾ 10 ಮಂದಿಯ ಗುಂಪುಗಳನ್ನು ರಚಿಸಿ ಒಬ್ಬೊಬ್ಬ ಉಪನ್ಯಾಸಕರಿಗೆ ದತ್ತು ವಹಿಸಿಕೊಡುವ ಪ್ರಯೋಗವನ್ನು ಇಲಾಖೆ ನಡೆಸಿತ್ತು.
ಆ ಉಪನ್ಯಾಸಕರು ತಮ್ಮ ದತ್ತು ವಿದ್ಯಾರ್ಥಿಗಳಿಗೆ ಪ್ರತಿ ದಿನ ಪ್ರಶ್ನೆ ಕೇಳಿ ಉತ್ತರ ಬರೆಸಿ, ಹೇಳಿಸಬೇಕಿತ್ತು. ಈ ಕಾರ್ಯಕ್ರಮವನ್ನೇನೋ ರೂಪಿಸಿದ ಇಲಾಖೆ ಅಧಿಕಾರಿಗಳು ಅನುಷ್ಠಾನವನ್ನು ಸರಿಯಾಗಿ ಗಮನಿಸದೇ ಹೋಗಿರುವುದೂ ವೈಫಲ್ಯಕ್ಕೆ ಕಾರಣವಾಗಿದೆ.
ಪೋಷಕರ ಸಭೆ: ಕಿರು ಪರೀಕ್ಷೆ ಮತ್ತು ಮಧ್ಯಂತರ ಪರೀಕ್ಷೆಯಲ್ಲಿ ತೇರ್ಗಡೆ ಪ್ರಮಾಣಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಮೂಲಕ ಕೌನ್ಸಿಲಿಂಗ್ ನಡೆಸಿ, ಪರೀಕ್ಷೆಗೆ ಸಿದ್ಧತೆ ಕುರಿತಾಗಿ ತರಬೇತಿಯನ್ನೂ ಕೊಡಿಸಲಾಗಿತ್ತು.  ಕಡಿಮೆ ಅಂಕ ಗಳಿಕೆ, ಗ್ರಹಿಕೆ ಮತ್ತು ವಾಚನಾಸಕ್ತಿ ಕೊರತೆಯಿರುವ ಮಕ್ಕಳ ಪೋಷಕರ ಸಭೆಗಳನ್ನೂ ಆಗಾಗ್ಗೆ ನಡೆಸಲಾಗಿತ್ತು. ಮನೆಪಾಠದ ಕಡೆ ಒತ್ತು ನೀಡಿದ ಉಪನ್ಯಾಸಕರು ತರಗತಿಗಳಲ್ಲಿ ಕಾಳಜಿ ವಹಿಸಿಲ್ಲ. ಇಲಾಖೆ ರೂಪಿಸಿದ ಕಾರ್ಯಕ್ರಮಗಳೂ ಫಲ ನೀಡಿಲ್ಲ.

ಸಂಜೆ ತಲುಪಿದ ಲಕೋಟೆ
ಬೆಂಗಳೂರಿನಲ್ಲಿ ಬೆಳಗ್ಗೆಯೇ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಇಲಾಖೆ ಅಧಿಕಾರಿಗಳ ಜತೆಗೂಡಿ ಫಲಿತಾಂಶದ ಸಮಗ್ರ ಮಾಹಿತಿ ಪ್ರಕಟಿಸಿದರು. ಬೆಂಗಳೂರು ಕಚೇರಿಯಿಂದ ಸಿಬ್ಬಂದಿ ಮೂಲಕ ಹೊರಟ ಫಲಿತಾಂಶದ ಲಕೋಟೆ ರಾಮನಗರ ತಲುಪಿದ್ದು ಸಂಜೆ 5.30ರ ಬಳಿಕವಷ್ಟೇ. ಆವರೆಗೆ ಇಲಾಖೆ ಉಪ ನಿರ್ದೇಶಕ ಎಚ್.ಡಿ. ಲಿಂಗರಾಜು ಅವರಿಗೇ ರಾಮನಗರ ಜಿಲ್ಲೆಯ ಸ್ಥಾನ ಮತ್ತು ಫಲಿತಾಂಶ ಪ್ರಮಾಣದ ಮಾಹಿತಿ ಇರಲಿಲ್ಲ. ಬೆಳಗ್ಗೆ ಹೊರಟ ಟಪಾಲು ತಮಗಿನ್ನೂ ತಲುಪಿಲ್ಲ. ಬಂದ ತಕ್ಷಣವೇ ವಿವರ ನೀಡುತ್ತೇನೆಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೊಂಡೇ ಬಂದರು. ಸಂಜೆ 7ರವರೆಗೂ ಕಾಯುತ್ತೇನೆ. ಅಷ್ಟರಲ್ಲಿ ಬಂದರೆ ವಿವರ ನೀಡುತ್ತೇನೆ. ಇಲ್ಲವಾದರೆ, ನಿಮಗೆ ಮಾಹಿತಿ ಒದಗಿಸುವುದು ನಾಳೆಯೇ ಎಂದಿದ್ದರು. ಸಂಜೆ 5.30ಕ್ಕೆ ಬಂದ ಲಕೋಟೆ ತೆರೆದು, ತಮ್ಮ ದರ್ಬಾರ್‌ನಲ್ಲಿ ಕುಸಿತ ಕಂಡ ಜಿಲ್ಲೆಯ ಫಲಿತಾಂಶದ ವಿವರವನ್ನು ಬೇಸರದಲ್ಲೇ ಬಿತ್ತರಿಸಿದರು.

ವಾಣಿಜ್ಯ ವಿಭಾಗವೇ ಹೆಚ್ಚು
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 3307 ವಿದ್ಯಾರ್ಥಿಗಳಲ್ಲಿ 2209 ತೇರ್ಗಡೆ ಆಗಿದ್ದು, ಶೇಕಡವಾರು ಫಲಿತಾಂಶ 66.80 ಆಗಿದೆ. ಕಲಾ ವಿಭಾಗದ ಫಲಿತಾಂಶ ಶೇಕಡ 42.24 ಮಾತ್ರವೆ ಆಗಿರುತ್ತದೆ. ಕಲಾ ವಿಭಾಗದಲ್ಲಿ 4160 ವಿದ್ಯಾರ್ಥಿಗಳ ಪೈಕಿ 1755 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಆಂಗ್ಲ ಭಾಷೆಯಲ್ಲಿ ಅನುತ್ತೀರ್ಣರೇ ಹೆಚ್ಚು. ವಿಜ್ಞಾನ ವಿಭಾಗದಲ್ಲಿ 1870 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಶೇಕಡ 54.22ರಷ್ಟು ಫಲಿತಾಂಶದೊಂದಿಗೆ 1014 ಮಂದಿ ತೇರ್ಗಡೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement