ಬೇಸಿಗೆ ಶಿಬಿರ ಸಮಾರೋಪ
ದೇವನಹಳ್ಳಿ: ಇಲ್ಲಿನ ಜೆಡಿಎಸ್ ಕಾರ್ಯಕರ್ತ ಪೂರ್ಣಚಂದ್ರರವರ ಸ್ಮರಣಾರ್ಥ ಆಯೋಜಿಸಿದ್ದ ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉಷಾ ಪೂರ್ಣಚಂದ್ರ ಆಯೋಜಿಸಿದ್ದರು.
ಸಮಾರಂಭದ ಉಧ್ಘಾಟನೆಯನ್ನು ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಸೂರ್ಯಕಲಾ ಮೂರ್ತಿ ನೆರವೇರಿಸಿ, ಉಷಾ ಪೂರ್ಣಚಂದ್ರ ಮಾತನಾಡಿದರು.
ಶಿಬಿರದಲ್ಲಿ ಮಕ್ಕಳಿಗೆ ಸಂಗೀತ, ಚಿತ್ರಕಲೆ, ಯೋಗ ಹಾಗೂ ನೃತ್ಯ ತಿಳಿಸಕೊಡಲಾಯಿತು ಎಂದು ಉಷಾ ಪೂರ್ಣಚಂದ್ರ ತಿಳಿಸಿ ನನ್ನ ನಿರೀರೀಕ್ಷೆ ಮೀರಿ ಮಕ್ಕಳು ಭಾಗವಹಿಸಿ ಯಶಸ್ವಿಗೊಳಿಸಿರುವುದು ಮರೆಯಲಾಗದ್ದು ಎಂದು ತಿಳಿಸಿದರು. ಶಿಕ್ಷಕಿ ಮಮತ, ಬೇಸಿಗೆ ಶಿಬಿರ ಮಕ್ಕಳ ಮನೋರಂಜನೆಯಷ್ಟೆ ಅಲ್ಲ ಅವರ ಮನೋವಿಕಾಸಕ್ಕಾಗಿ ಮತ್ತು ಅವರಲ್ಲಿನ ಪ್ರತಿಭೆಗೆ ವೇದಿಕೆಯಾಗಿದೆ ಎಂದರು. ತಾಪಂ ಮಾಜಿ ಅಧ್ಯಕ್ಷೆ ಬಿ.ಕೆ. ಶಿವಪ್ಪ, ಹನುಮಂತಪ್ಪ, ಉಪಾಧ್ಯಕ್ಷೆ ಅರುಂಧತಿ ಸಿದ್ದಾರ್ಥ, ರಂಗಸ್ವಾಮಿ ಇದ್ದರು.