ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಗಡಿಯಲ್ಲೇ ಜಂಗೀಕುಸ್ತಿ

Rashmi Kasaragodu
Updated On : 9 May 2014, 1:00 am

ರಾಮನಗರ ಜಿಲ್ಲೆಯ ಉಳಿದ 3 ಕ್ಷೇತ್ರಗಳಿಗಿಂತ ಮಾಗಡಿ ಕ್ಷೇತ್ರದ ಹೋರಾಟ ಭಿನ್ನ. ಅಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹೋರಾಟವಿದೆ. ಹಾಲಿ ನಿರ್ದೇಶಕ ನರಸಿಂಹಮೂರ್ತಿ ಮತ್ತೊಮ್ಮೆ ಆಯ್ಕೆಗಾಗಿ ಹೋರಾಟ ನಡೆಸುತ್ತಿದ್ದಾರೆ.
ನರಸಿಂಹಮೂರ್ತಿ ವಿರುದ್ಧ ಸೆಡ್ಡು ಹೊಡೆದಿರುವ ಸ್ವಪಕ್ಷೀಯರಾದ ರಾಜು, ಹುಲಿಕಲ್ ರಾಜಣ್ಣ ಅವರು ತಮಗೇ ಸ್ಪರ್ಧಾವಕಾಶ ಕಲ್ಪಿಸುವಂತೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ದುಂಬಾಲು ಬಿದ್ದಿದ್ದಾರೆ. ಆಕಾಂಕ್ಷಿಗಳನ್ನು ಸಂತೈಸಲು ಬಾಲಕೃಷ್ಣ ಕಸರತ್ತು ನಡೆಸುವಂತಾಗಿದೆ.
ಕಳೆದ ಬಾರಿ ನರಸಿಂಹಮೂರ್ತಿ ಎದುರು ಸೆಣೆಸಿ, ಸಾಲ ಮಾಡಿಕೊಂಡಿದ್ದ ಕಾಂಗ್ರೆಸ್ ಮುಖಂಡ ಬೋರ್‌ವೆಲ್ ನರಸಿಂಹಯ್ಯ ಈಗ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಅವರ ಉಮೇದುವಾರಿಕೆಗೆ ಕೆಪಿಸಿಸಿ ಸದಸ್ಯ ಎ. ಮಂಜುನಾಥ್, ಸಂಸದ ಡಿ.ಕೆ. ಸುರೇಶ್ ಅಸ್ತು ಎಂದಿದ್ದಾರೆ.
ಕಳೆದ ಬಾರಿಯ ಸೋಲಿನ ಸಿಂಪಥಿ ನರಸಿಂಹಯ್ಯ ಅವರಿಗಿದೆ. ಬಮೂಲ್, ಕೆಎಂಎಫ್ ಚುಕ್ಕಾಣಿ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನರಸಿಂಹಯ್ಯ ಅವರ ಮೇಲೆ ಸಾಕಷ್ಟು ಬಂಡವಾಳ ಹೂಡಿ, ಮಾಗಡಿ ಸ್ಥಾನ ಕಸಿದುಕೊಳ್ಳಲು ಸಹಜವಾಗಿಯೇ ಕಸರತ್ತು ನಡೆಸಲಿದೆ.
ಇಲ್ಲೂ ಮತಬೇಟೆ ಜೋರಾಗಿಯೇ ಸಾಗಿದೆ. ನರಸಿಂಹಮೂರ್ತಿ ಜತೆಗೆ ನರಸಿಂಹಯ್ಯ ಪರವೂ ಬಂಡವಾಳ ಹೂಡಿಕೆ ನಡೆಯಲಿದೆ. ಹೀಗಾಗಿ ಎರಡೂ ಕಡೆಯ ಲಾಭ ಪಡೆಯಲು ತವಕಿಸುತ್ತಿರುವ ಮತದಾರರು ಯಾರ ಕಡೆಯಿಂದಲೂ ಪ್ರವಾಸಕ್ಕೆ ಹೊರಡಲು ಸುತಾರಾಂ ಸಿದ್ಧರಿಲ್ಲ.


ಮತ ಹಕ್ಕಿಗೆ ವಿಮಾನ ಏರಿದರು!
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಸಂಬಂಧಿ ರಾಜು ಅವರು ಕುಟುಂಬ ಸಮೇತ ಹೊರ ರಾಜ್ಯ ಪ್ರವಾಸದಲ್ಲಿದ್ದರು. ಬಮೂಲ್ ಚುನಾವಣೆಯ ಮತ ಹಕ್ಕು ಪಡೆಯಲು ಮೊನ್ನೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದು, ಅಲ್ಲಿಂದ ಕಾರಿನಲ್ಲಿ ಮಾಗಡಿಗೆ ಆಗಮಿಸಿದ್ದರು. ಜೆಡಿಎಸ್ ಪಕ್ಷದಿಂದ ಪ್ರಬಲ ಸ್ಪರ್ಧಾಕಾಂಕ್ಷಿಯೂ ಆದ ರಾಜು ಹುಲಿಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮತ ಹಕ್ಕು ಪಡೆದಿದ್ದಾರೆ. ಇವರ ತಂದೆ ನಾರಾಯಣಸ್ವಾಮಿ ಚಕ್ರಬಾವಿಯಿಂದ, ದಾಯಾದಿ ಶಾಸಕ ಬಾಲಕೃಷ್ಣ ಬೆಸ್ತರಪಾಳ್ಯದಿಂದ ಮತ ಹಕ್ಕು ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement