ರೈತರಿಗೆ ಪವರ್ ಟಿಲ್ಲರ್ ವಿತರಣೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಪಂ, ತಾಪಂ ಹಾಗೂ ಇಲ್ಲಿನ ಕೃಷಿ ಇಲಾಖೆ ಆಶ್ರಯದಲ್ಲಿ 2013-14 ನೇ ಸಾಲಿನ ಫಲಾನುಭವಿ ರೈತರಿಗೆ ರಿಯಾಯಿತಿ ದರದಲ್ಲಿ ಪವರ್ ಟಿಲ್ಲರ್ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು.
ಶಾಸಕ ಪಿಳ್ಳಮುನಿಶಾಮಪ್ಪ ರೈತರಿಗೆ ಪವರ್ ಟಿಲ್ಲರ್ ವಿತರಣೆ ಮಾಡಿದರಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತಿರುವುದಲ್ಲದೆ ಸರ್ಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ವೈಜ್ಞಾನಿಕವಾಗಿ ಬೆಳೆ ಬೆಳೆಯಬೇಕು ಎಂದರು.
ಕೃಷಿ ಅಧಿಕಾರಿ ಬಿ.ಟಿ. ವಿನೋದಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ದೊಡ್ಡಸಣ್ಣೆ ಮುನಿರಾಜು, ತಾಪಂ ಸದಸ್ಯ ರಾಮಣ್ಣ, ಇಲಾಖೆ ಅಧಿಕಾರಿ ಅನ್ಸಾರಿ ಮತ್ತು ವೆಂಕಟೇಶಪ್ಪ ಇದ್ದರು.