ಅವಿಮುಕ್ತೇಶ್ವರಸ್ವಾಮಿ ರಥೋತ್ಸವ ನಾಳೆ
ಹೊಸಕೋಟೆ: ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವಕ್ಕೆ ಚಾಲನೆ ದೊರೆತಿದೆ. 14ರಂದು ಬುದ್ಧ ಪೂರ್ಣಿಮೆಯಂದು ಎರಡೂ ಮಹೋತ್ಸವ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿವೆ. ಪಟ್ಟಣದ ಎಲ್ಲಾ ಜನಾಂಗದವರು ಸಹ ಕರಗ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಊರ ಹಬ್ಬವಾಗಿ ಆಚರಿಸುತ್ತಿರುವುದು ಸೌಹಾರ್ದತೆಗೆ ನಿದರ್ಶನ. 14ರಂದು ರಾತ್ರಿ ಹೂವಿನ ಕರಗ, 15ರಂದು ವಸಂತೋತ್ಸವ, ಭಾರತಪುರಾಣ, ಗಾವಿನೊಂದಿಗೆಮುಕ್ತಾಯಗೊಳ್ಳಲಿದೆ. ರಾತ್ರಿ ಸುಮಾರು 1 ಗಂಟೆಗೆ ದೇವಾಲಯದಿಂದ ಹೊರಬರುವ ಹೂವಿನ ಕರಗ ಬಡಾವಣೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಹಿಂದಿರುಗುವುದು. ಸಾವಿರಕ್ಕೂ ಹೆಚ್ಚು ವೀರಕುಮಾರರು ಭಾಗಿ. ರಾಜ್ಯದ ಇತರೆಡೆ ನಡೆಯುವ ಕರಗ ಮಹೋತ್ಸವಗಳಿಗಿಂತಲೂ ಸುಮಾರು ಸಾವಿರಕ್ಕೂ ಹೆಚ್ಚಿನ ವೀರಕುಮಾರರು ಪಾಲ್ಗೊಳ್ಳುವುದು ವೈಶಿಷ್ಪ್ಯವಾಗಿದೆ. 14ರ ಬುದ್ಧಪೂರ್ಣಿಮೆಯಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಮೇ 10ರಂದು ಅಂಕುರಾರ್ಪಣೆ ಮೂಲಕ ಆರಂಭಿಸಿ ಮೇ 23ರಂದು ಪಲ್ಲಕ್ಕಿ ಉತ್ಸವದೊಂದಿಗೆ ಸಮಾಪನಗೊಳ್ಳುತ್ತದೆ.
15ರಂದು ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 15ರಂದು 150ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ನಾಗರಾಜಯ್ಯ ತಿಳಿಸಿದ್ದಾರೆ. ಶಾಸಕ ಪಿಳ್ಳಮುನಿಶಾಮಪ್ಪ ಉದ್ಘಾಟನೆ ನೆರವೇರಿಸಲಿದ್ದು, ಬೆಂಗಳೂರಿನ ಗುತ್ತಿಗೆದಾರ ಮುನಿರಾಜು ಶಿಬಿರ ಪ್ರೊಯೋಜಿಸಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಕೆ.ಎಸ್.ರಮೇಶ್‌ಬಾಬು ತಿಳಿಸಿದ್ದಾರೆ.
ಮೌಕ್ತಿಕಾಂಬ ಕರಗ ನಾಳೆ
ದೇವನಹಳ್ಳಿ: ಇಲ್ಲಿನ ಮರಳುಬಾಗಿಲು ರಸ್ತೆಯಲ್ಲಿರುವ ಶಕ್ತಿದೇವತೆ ಮೌಕ್ತಿಕಾಂಬ ಕರಗ ಮಹೋತ್ಸವ ಬುಧವಾರ ರಾತ್ರಿ ನಡೆಯಲಿದ್ದು, 13 ರಂದು ರಾತ್ರಿ 8 ಗಂಟೆಗೆ ಅಗ್ನಿಕುಂಡ ಮತ್ತು ದೀಪಾರತಿಗಳ ಮೆರವಣಿಗೆ ಹಾಗೂ 15 ರಂದು ವಸಂತೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಕರಗ ಮಹೋತ್ಸವ ದಿನ ಪಟ್ಟಣದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್ಯ ಆಯೋಜಿಸಿದೆ. ಅಂದು ವೇಣುಗೋಪಾಲಸ್ವಾಮಿ, ಮಾರ್ಕೆಟ್ ಆಂಜನೇಯಸ್ವಾಮಿ, ಮರಳುಬಾಗಿಲು ಮುನೇಶ್ವರಸ್ವಾಮಿ, ಗಂಗಾಪರಮೇಶ್ವರಿ, ಅಣ್ಣಮ್ಮ ದೇವಿ, ಚೌಡೇಶ್ವರಿ ಪಲ್ಲಕ್ಕಿ ಉತ್ಸವ ಹಾಗೂ ಹಳೇ ಬಸ್‌ನಿಲ್ದಾಣ ಮೈದಾನದಲ್ಲಿ ವಿನಾಯಕ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಕುರುಕ್ಷೇತ್ರ ನಾಟಕ ಆಯೋಜಿಸಲಾಗಿದೆ.