ಗ್ರಾಮಾಂತರ ಜಿಲ್ಲೆ: ನೆಲಮಂಗಲ ಪ್ರಥಮ
ನೆಲಮಂಗಲ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೆಲಮಂಗಲ ತಾಲೂಕು 98.61 ರಷ್ಟು ಫಲಿತಾಂಶ ಪಡೆದು ಗ್ರಾಮಾಂತರ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ರಾಜ್ಯದ ತಾಲೂಕುಗಳ ಪೈಕಿ 12 ಸ್ಥಾನಗಳಿಸಿದೆ. ಅತ್ಯತ್ತಮ ಫಲಿತಾಂಶ ಬಂದಿರುವುದಕ್ಕೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್ ಅಭಿನಂಧಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 44 ಪ್ರೌಢಶಾಲೆಗಳಿದ್ದು, 11 ಸರ್ಕಾರಿ, 14 ಅನುದಾನಿಕ ಹಾಗೂ 19 ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು ಪರೀಕ್ಷೆಗೆ ಹಾಜರಿದ್ದ 2676 ವಿದ್ಯಾರ್ಥಿಗಳಲ್ಲಿ 2597 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಬಾಲಕರು ಹಾಗೂ 1445 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇವರಲ್ಲಿ ಒಟ್ಟು 2617 ವಿದ್ಯಾರ್ಥಿಗಳು 1313 ಗಂಡು ಮಕ್ಕಳು ಮತ್ತು 1304 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದು, ಶೇ.90.39ರಷ್ಟು ಫಲಿತಾಂಶ ಲಭಿಸಿದೆ. 2009-10ನೇ ಸಾಲಿನಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದ್ದು 2010-11ನೇ ಸಾಲಿನಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಒಟ್ಟಾರೆ ತಾಲೂಕಿನಲ್ಲಿ ಬಾಲಕರು ಮೇಲುಗೈ ಸಾಧಿಸಿದ್ದಾರೆ.
ತಾಲೂಕಿನಲ್ಲಿ 2 ಸರ್ಕಾರಿ ಪ್ರೌಢಶಾಲೆ, 3 ಅನುದಾನ ಸಹಿತ ಪ್ರೌಢಶಾಲೆ ಮತ್ತು 14 ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿವೆ. ಸರ್ಕಾರಿ ಶಾಲೆಗಳಾದ ವೈ.ಕೆ.ಹಳ್ಳಿ ಮತ್ತು ಮಣ್ಣೆ ಪ್ರೌಡಶಾಲೆ, ಅನುದಾನ ಸಹಿತ ಶಾಲೆಗಳಾದ ಮರಳಕುಂಟೆ ಮಂಜುನಾಥ, ಮದಲಕೋಟೆ ಯೋಗಾನರಸಿಂಹ ಪ್ರೌಢಶಾಲೆ, ಕಂಬಾಳಿನ ದೇಶೀಕೇಂದ್ರ ಶಿವಾಚಾರ್ಯ ಪ್ರೌಢಶಾಲೆ ಮತ್ತು ಶಿವಗಂಗೆಯ ಶಿವಗಂಗಾ ಗ್ರಾಮಾಂತರ ಪ್ರೌಢಶಾಲೆಗಳು.
ಇನ್ನು ಅನುದಾನ ರಹಿತ ಶಾಲೆಗಳಾದ ವಾಜರಹಳ್ಳಿಯ ಸೆಂಟ್ಆನ್ಸ್ ಆಂಗ್ಲ ಶಾಲೆ, ಬಸವೇಶ್ವರ ಆಂಗ್ಲಶಾಲೆ, ಬಿ.ಪಿ.ಇಂಡಿಯನ್ ಶಾಲೆ, ಎಂಇಎಸ್ ಪ್ರೌಡಶಾಲೆ, ವಿನಾಯಕ ಪ್ರೌಢಶಾಲೆ, ಎಬಿನೇಜರ್ ಶಾಲೆ, ಥಾಮಸ್ ಶಾಲೆ, ಸನ್ ರೈಸ್ ಆಂಗ್ಲ ಶಾಲೆ, ವಿಶಾಲ್ ಆಂಗ್ಲಶಾಲೆ, ಕಣ್ವ ಶಾಲೆ, ನ್ಯೂ ಸೆಂಚುರಿ ಶಾಲೆ, ಮಾಗಡಿ ಕೆಂಪೇಗೌಡ, ತ್ಯಾಮಗೊಂಡ್ಲುವಿನ ನಿಸರ್ಗ ಪ್ರೌಢಶಾಲೆ 100 ರಷ್ಟು ಫಲಿತಾಂಶ ಪಡೆದಿವೆ.
ವಿಶೇಷವೆಂದರೆ ಕಳೆದ 7 ವರ್ಷದಿಂದಲೂ ಅರೆಬೊಮ್ಮನಹಳ್ಳಿ ಎಸ್.ಎಲ್.ಎನ್.ಹೆಚ್ ಪ್ರೌಡಶಾಲೆ ಶೇ.100 ರಷ್ಟು ಫಲಿತಾಂಶ ಪಡೆಯುತ್ತಲೇ ಬಂದಿದ್ದು, ತಾಲೂಕು ಮತ್ತು ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.
ರಾಹುಲ್ರಾಜ್ ತಾಲೂಕಿಗೆ ಪ್ರಥಮ
ತಾಲೂಕಿನಲ್ಲಿಯೇ ರಾಹುಲ್ರಾಜ್ 609 ಅತೀ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ. ಇನ್ನು 607 ಸುಮ ಅಂಕಗಳನ್ನು ಇಬ್ಬರು ವಿದ್ಯಾರ್ಥಿಗಳು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನು 605 ಶ್ರೀನಿಧಿ ಅಂಕ ಪಡೆದು ತೃತೀಯ ಸ್ಥಾನ ಪಡೆದ ಪ್ರಮುಖರಾಗಿದ್ದಾರೆ.