ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣ: ಶೇ.79

Rashmi Kasaragodu
Updated On : 14 May 2014, 1:25 am

ಚನ್ನಪಟ್ಟಣ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಶೇ. 79.24 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಳೆದ ಸಾಲಿಗಿಂತ ಈ
ಬಾರಿ ಕಡಿಮೆ ಫಲಿತಾಂಶ ದೊರೆತಿದೆ.
ಕಳೆದ ಬಾರಿ ಶೇ.85 ರಷ್ಟು ಫಲಿತಾಂಶ ಪಡೆದಿದ್ದ ತಾಲೂಕು ಈ ಬಾರಿ 79ಕ್ಕೆ ತೃಪ್ತಿ ಪಟ್ಟು ಕೊಂಡಿದ್ದು ಕಳೆದ ಸಾಲಿನಲ್ಲಿ 10ಕ್ಕೂ ಹೆಚ್ಚು ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದವು. ಆದರೆ ಈ ಬಾರಿ ಕೇವಲ ಮೂರು ಶಾಲೆ ಮಾತ್ರ ಈ ಸಾಧನೆ ಮಾಡಿವೆ.
ಪ್ರಸಕ್ತ ಸಾಲಿನಲ್ಲಿ 1706 ವಿದ್ಯಾರ್ಥಿಗಳು, 1633 ವಿದ್ಯಾರ್ಥಿನಿಯರು ಸೇರಿ 3339 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ  1276 ವಿದ್ಯಾರ್ಥಿಗಳು, 1370 ವಿದ್ಯಾರ್ಥಿನಿಯರು ಸೇರಿ ಒಟ್ಟು 2646 ಮಂದಿ ಉತ್ತೀರ್ಣ ಗೊಂಡಿದ್ದಾರೆ.
ತಾಲೂಕಿನಲ್ಲಿ 105 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 941 ಮಂದಿ ಪ್ರಥಮ ದರ್ಜೆಯಲ್ಲಿ, 948 ಮಂದಿ ದ್ವಿತೀಯ ದರ್ಜೆಯಲ್ಲಿ, 652 ಮಂದಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಸೆಂಟ್ ಜೋಸೆಫ್ ಶಾಲೆಯ ಪ್ರೀತಮ್ ಡಿ.ಪಿ 625ಕ್ಕೆ 601 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ಬಾಲು ಪಬ್ಲಿಕ್ ಶಾಲೆಯ ಪ್ರಜ್ವಲ್‌ಗೌಡ 597 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದು, 594 ಅಂಕ ಪಡೆದ ಯೋಗೇಶ್‌ಗೌಡ ತೃತೀಯ ಸ್ಥಾನ ಪಡೆದಿದ್ದಾರೆ.
ತಾಲೂಕಿನ ಹೊನ್ನಾಯ್ಕನ ಹಳ್ಳಿ ಸರ್ಕಾರಿ ಪ್ರೌಢಶಾಲೆ, ಸೆಂಟ್‌ಆನ್ಸ್ ಪ್ರೌಢಶಾಲೆ, ನಿವೇದಿತಾ ಪ್ರೌಢಶಾಲೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದು, 10 ಶಾಲೆಗಳು ಶೇ.90ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ. ಈಬಾರಿಯ ಫಲಿತಾಂಶದಲ್ಲಿ ತಾಲೂಕಿನ 28 ಸರ್ಕಾರಿ ಪ್ರೌಢಶಾಲೆಗಳು 77.79 ರಷ್ಟು ಫಲಿತಾಂಶ ಪಡೆದರೆ, 12 ಅನುದಾನಿತ ಶಾಲೆಗಳು 76.63 ರಷ್ಟು, 16 ಅನುದಾನ ರಹಿತ ಶಾಲೆಗಳು 79.23 ಫಲಿತಾಂಶ ಪಡೆದಿವೆ.
ಕಡಿಮೆ ಫಲಿತಾಂಶಕ್ಕೆ ಪರಿಹಾರ: ಕಳೆದ ಸಾಲಿಗಿಂತ ಈಬಾರಿ ತಾಲೂಕು ಕಡಿಮೆ ಫಲಿತಾಂಶ ಪಡೆಯಲು ಕಾರಣವೇನು ಎಂಬ ಬಗ್ಗೆ ಸಂಬಂಧಿಸಿದವರ ಜತೆ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು, ಕೆಲವೆಡೆ ಶಿಕ್ಷಕರ ಸಮಸ್ಯೆ ಇದ್ದು ಇದಕ್ಕೆ ಈ ಸಾಲಿನಲ್ಲಿ ಪರಿಹಾರ ಕಲ್ಪಿಸಲಾಗುವುದು, ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಅತಿ ಹೆಚ್ಚು ಅನುತ್ತೀರ್ಣರಾಗಿದ್ದಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದ್ದಾರೆ.
ಜೂನ್ ಮೊದಲ ದಿನದಿಂದಲೇ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು, ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಫಲಿತಾಂಶಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಕಡಿಮೆ ಫಲಿತಾಂಶಕ್ಕೆ ಕಾರಣ ಹುಡುಕಿ ಪರಿಹಾರೋಪಾಯ ಪಡೆದು ಕೊಳ್ಳುವ ಮೂಲಕ ಮುಂದಿನ ಸಾಲಿನಲ್ಲಿ ಅತಿಹೆಚ್ಚು ಫಲಿತಾಂಶ ಪಡೆಯಲು ಶ್ರಮಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement