ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೃಶ್ಯಕಲಾ ಪದವಿ ಪ್ರವೇಶಕ್ಕೆ ಅರ್ಜಿ

Rashmi Kasaragodu
Updated On : 14 May 2014, 1:28 am

ರಾಮನಗರ: ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಪ್ರಥಮ ಮೂಲ ತರಗತಿ, ಪ್ರಥಮ ಬಿ.ಎಫ್.ಎ ತರಗತಿಗಳ ಚಿತ್ರಕಲೆ, ಶಿಲ್ಪಕಲೆ, ಅಚ್ಚಕಲೆ (ಗ್ರಾಫಿಕ್ಸ್) ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ, ಕಲಾ ಇತಿಹಾಸ ಪ್ರವೇಶಕ್ಕಾಗಿ 2014-15ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಿದೆ. ಪ್ರಥಮ ಮೂಲ ತರಗತಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋವುತಿ ಗರಿಷ್ಟ 22 ವರ್ಷ, ಪ್ರಥಮ ಬಿಎಫ್‌ಎಗೆ ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋವುತಿ ಗರಿಷ್ಠ 24 ವರ್ಷ. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣಾ ಪತ್ರಿಕೆಯನ್ನು ರು.125 ಪಾವತಿಸಿ ಖುದ್ದಾಗಿ ಅಥವಾ ರು.150ರ  ಡಿ.ಡಿ.ಯನ್ನು ಡೀನ್, ಕಾವಾ, ಸಯ್ಯಾಜಿರಾವ್ ರಸ್ತೆ, ಸಿಟಿಐ. ಕಟ್ಟಡ, ಮೈಸೂರು ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.2ರೊಳಗೆ ಸದರಿ ವಿಳಾಸಕ್ಕೆ ಕಳುಹಿಸಬಹುದು.ಪ್ರಥಮ ಮೂಲ ಹಾಗೂ ಬಿಎಫ್‌ಎ ತರಗತಿಗೆ ಜೂ.10ರ ಬೆಳಗ್ಗೆ 11ಕ್ಕೆ ಅರ್ಹತಾ ಪರೀಕ್ಷೆ, ಮಧ್ಯಾಹ್ನ 2ಕ್ಕೆ ವಯಕ್ತಿಕ ಸಂದರ್ಶನವನ್ನು ಭಾರತ ಸರ್ಕಾರದ ಪಠ್ಯ ಪುಸ್ತಕ ಮುದ್ರಣಾಲಯದ ಆವರಣ, ಟಿ.ನರಸೀಪುರ ರಸ್ತೆ, ಮೈಸೂರು ಇಲ್ಲಿ ನಡೆಸಲಾಗುವುದು. ಶುಲ್ಕ ಪಾವತಿಸಲು ಜೂ.14 ಕೊನೆಯ ದಿನಾಂಕವಾಗಿದ್ದು, ತರಗತಿಗಳು ಜೂ.16ರಿಂದ ಪ್ರಾರಂಭವಾಗುತ್ತದೆ ಎಂದು ದೃಶ್ಯಕಲಾ ಕಾಲೇಜು ಡೀನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement