ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ: ಸತ್ಯಶ್ರೀ ಪ್ರಥಮ

Rashmi Kasaragodu
Updated On : 14 May 2014, 1:29 am

ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಸ್ಟರ್ಲಿಂಗ್ ಪ್ರೌಢಶಾಲೆಯ ಆರ್.ವಿ. ಸತ್ಯಶ್ರೀ ಶೇ.97.5 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ವಿಜಯಪುರ ಎವರ್‌ಗ್ರೀನ್ ಶಾಲೆಯ ಎಚ್.ಸಿ.ನಂದೀಶಗೌಡ-ಶೇ. 97, ದೇವನಹಳ್ಳಿ ಆಕ್ಸ್‌ಫರ್ಡ್ ಶಾಲೆಯ ಎಸ್.ಎಚ್.ಮೇಘನಾ- ಶೇ.96.96, ಕಾರ್ಮೆಲ್ ಶಾಲೆಯ ಎಸ್.ಪಲ್ಲವಿ ಶೇ.96 ಹಾಗೂ ಬೂದಿಗೆರೆ ಸ್ಟರ್ಲಿಂಗ್ ಶಾಲೆಯ ಎ.ರಂಜಿತ- ಶೇ.95 ಅಂಕ ಗಳಿಸಿ ಪ್ರಥಮ ಐದು ಸ್ಥಾನ ಗಳಿಸಿದ್ದಾರೆ ಎಂದು ಬಿಇಒ ಮುನಿರಾಜು ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕಿನಲ್ಲಿ 2974 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು, ಅವರಲ್ಲಿ 2403 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಾಲೂಕಿನ ಫಲಿತಾಂಶ ಶೇ.81 ಆಗಿದೆ. ದೇವನಹಳ್ಳಿ ತಾಲೂಕಿನಲ್ಲಿ 18 ಸರ್ಕಾರಿ, 8 ಅನುದಾನಿತ ಹಾಗೂ 27 ಖಾಸಗಿ ಸೇರಿ ಒಟ್ಟು 53 ಪ್ರೌಢಶಾಲೆಗಳಲ್ಲಿ ಗಂಗವಾರ  ಸನ್‌ರೈಸ್‌ಶಾಲೆ, ವಿಜಯಪುರದ ಪ್ರಗತಿಶಾಲೆ, ಎವರ್‌ಗ್ರೀನ್ ಶಾಲೆ, ಜೇಸಿಸ್ ಶಾಲೆ, ನಂದಿನಿ ಶಾಲೆ, ರೋಟರಿ ಶಾಲೆ, ದೇವನಹಳ್ಳಿಯ ಕಾರ್ಮೆಲ್‌ಶಾಲೆ, ಆಕ್ಸ್‌ಫರ್ಡ್ ಶಾಲೆ, ಎಸ್‌ಎಲ್‌ಎಸ್ ಶಾಲೆ, ಜ್ಞಾನದೀಪ ಶಾಲೆ, ಕನ್ನಮಂಗಲ ಎಂವಿಎಂ ಶಾಲೆ, ದುದ್ದನಹಳ್ಳಿ ಎಂವಿಎಂ ಶಾಲೆ,ಕುಂದಾಣದ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ಶಾಸಕರ ಅಭಿನಂದನೆ: ದೇವನಹಳ್ಳಿ ತಾಲೂಕು ಎರಡನೇ ಸ್ಥಾನ ಗಳಿಸಿರುವುದು, ತಾಲೂಕಿನಲ್ಲಿ ಪ್ರಥಮ ಸ್ಥಾನಗಳಿಸಿದ ಸತ್ಯಶ್ರೀಗೆ ಶಾಸಕ ಪಿಳ್ಳಮುನಿಶಾಮಪ್ಪ ಅಭಿನಂದನೆ ಸಲ್ಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement