ಬಿಜೆಎಲ್ ಶಾಲೆಗೆ ಶೇ.98 ಫಲಿತಾಂಶ
ಚನ್ನಪಟ್ಟಣ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿನ ಬಿಜೆಎಲ್ ಪ್ರೌಢಶಾಲೆ ಶೇ.98 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತಿದ್ದ ಶಾಲೆಯ 72 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಗೆ ಉತ್ತಮ ಫಲಿತಾಂಶ ದೊರೆಯಲು ಕಾರಣವಾದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಬಿ. ದೊಳ್ಳೇಗೌಡ ಅಭಿನಂದಿಸಿದ್ದಾರೆ.