ಮುಳುಕಟ್ಟಮ್ಮದೇವಿ ಜಾತ್ರೆ
ಮಾಗಡಿ: ಮಾಗಡಿ ಪಟ್ಟಣದ ತಿರುಮಲೆ ಗ್ರಾಮದ ಸಹ್ಯಾದ್ರಿಯಲ್ಲಿ ನೆಲೆಸಿರುವ ಆದಿಶಕ್ತಿ ಮುಳುಕಟ್ಟಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ದೇವಿಗೆ ಮಹಿಳೆಯರಿಂದ ಹೊಡೆದ ಹೊಂಬಾಳೆ ಮುಡಿಸಿದ ತಂಬಿಟ್ಟಿನಾರತಿ ನೈವೇದ್ಯ ಅರ್ಪಿಸಲಾಯಿತು. ಬುಧವಾರ ಮಧ್ಯಾಹ್ನ 1.45ಕ್ಕೆ ದೇವಿಗೆ ತುಂಬಿದ ತಳಿಗೆ ನೈವೇಧ್ಯ ಅರ್ಪಿಸಿ, ಮಹಾಮಂಗಳಾರತಿ ನೆರವೇರಿಸುವುದಾಗಿ ಅರ್ಚಕ ಗೋವಿಂದರಾಜು ತಿಳಿಸಿದ್ದಾರೆ. ಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ ತಿರುಮಲೆ ರಾಜ ಬೀದಿಯಲ್ಲಿ ಅರೆ, ತಮಟೆ, ಮಂಗಳವಾದ್ಯ ಮುಳುಕಟ್ಟಮ್ಮದೇವಿ ಭವ್ಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.