ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಡಿದ ಚಾಲಕನಿಂದ ಅಪಘಾತ; ಇಬ್ಬರ ಸಾವು

Rashmi Kasaragodu
Updated On : 15 May 2014, 1:28 am

ಕ.ಪ್ರ.ವಾರ್ತೆ    ಆನೇಕಲ್ಲು    ಮೇ 14
ಪಾನಮತ್ತ ಚಾಲಕ ಪ್ರಭು(47) ಎಂಬಾತ ಜಗಳವಾಡಿಕೊಂಡು ಲಾರಿಯನ್ನು ಚಲಿಸಿಕೊಂಡು ಬರುತ್ತಿದ್ದಾಗ ಇಲ್ಲಿನ ದಾಸನಪುರ ಬಳಿ ಸರಣಿ ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣನಾದ ಘಟನೆ ಬುಧವಾರ ನಡೆದಿದೆ.
ಮೊದಲು ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ  ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದದ್ದಲ್ಲದೆ ಜನರು ಕೂಗಿಕೊಂಡಾಗ ಗಾಬರಿಯಾದ ಆತ ಲಾರಿಯನ್ನು ನಿಲ್ಲಿಸದೇ ಅತ್ತಿಬೆಲೆ ಕಡೆ ಬಂದಾಗ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಕ್ಕೆ ಮತ್ತೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣನಾದ. ಅತ್ತಿಬೆಲೆಯ ರೈತ ಪಾಪರೆಡ್ಡಿ (55) ಮತ್ತು ತಮಿಳುನಾಡಿನ ಜೂಜುವಾಡಿಯ ಜನಾರ್ದನ್ (30) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ನಂತರ ಸರ್ಜಾಪುರ ರಸ್ತೆ ಕಡೆ ಹೊರಟ ಲಾರಿ ಬಿದರಗುಪ್ಪೆ ಕೆರೆ ಬಳಿ ಬಂದಾಗ ಏರಿ ದಾಟಲಾಗದೇ ತಡೆ ಗೋಡೆಗೆ ಡಿಕ್ಕಿ ಹೊಡೆದು ಕೆರೆಗೆ ಬಿತ್ತು.
ಲಾರಿಗೆ ಬೆಂಕಿ: ಸರಣಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಚಾಲಕನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದರು. ಆಕ್ರೋಶಗೊಂಡ ಜನ ಲಾರಿಗೆ ಬೆಂಕಿ ಹಚ್ಚಿದರು. ಸ್ಥಳಕ್ಕೆ ಧಾವಿಸಿದ ವೃತ್ತ ನಿರೀಕ್ಷಕ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರಕ್ಕೆ ಮುಂದಾದರು. ಜನರನ್ನು ನಿಯಂತ್ರಿಸಲು ಸಾಧ್ಯವಾಗದಾಗ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದರು. ನಂತರ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಬಂದು ಲಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದರು.
ಸರಣಿ ಅಪಘಾತ ಸುದ್ದಿ ಹರಡುತ್ತಿದ್ದಂತೆ ಜನ ಜಾತ್ರೆಯಂತೆ  ಸ್ಥಳದಲ್ಲಿ ಜಮಾಯಿಸಿದರು. ಇಂದು ಅತ್ತಿಬೆಲೆ ಕರಣ ಕಾರಣ ಹೆಚ್ಚಿನ ಜನರು ಗ್ರಾಮಕ್ಕೆ ಬಂದಿದ್ದರು. 10 ಜನ ಸತ್ತರು ಎಂಬ ಗಾಳಿಸುದ್ದಿಗೆ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಬಳಿ ನೂರಾರು ಜನ ಜಮಾಯಿಸಿದರು.  ಅಪಘಾತವಾದ ವಾಹನಗಳನ್ನು ಠಾಣೆ ಬಳಿ ನಿಲ್ಲಿಸಲಾಯಿತು.
ಸ್ಥಳಕ್ಕೆ ಐಡಿಪಿ ಸಯ್ಯದ್ ಉಲ್ಪತ್ ಹುಸೇನ್, ಡಿವೈಎಸ್ಪಿ ಬಲರಾಮೇಗೌಡ, ಎಸ್ಪಿ ರಮೇಶ್ ಬಾನೋಟ್, ವೃತ್ತ ನಿರೀಕ್ಷಕ ಕಿಶೋರ್ ಸ್ಥಳದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement