ಗಾಯಾಳುಗಳು ಆಸ್ಪತ್ರೆಗೆ
ಆನೇಕಲ್ಲು: ಸರಣಿ ಅಪಘಾತದಲ್ಲಿ ತೀವ್ರ ಗಾಯಗೊಂಡ 7 ಜನರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಮೂಳೆ ಮುರಿತ, ಸೊಂಟ ಮುರಿದವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಿಲ್ಕುಮಾರ್, ಮಂಜು, ಶಂಕರಪ್ಪ, ಸಂಪಂಗಪ್ಪ, ಬಿದರಗುಪ್ಪೆಯಿಂದ ಅತ್ತಿಬೆಲೆ ಕಡೆಗೆ ಬರುತ್ತಿದ್ದ ಒಂದೇ ಕುಟುಂಬದ ತಂದೆ ತಾಯಿ ಮತ್ತು ಬಾಲಕಿಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ಅತ್ತೆಬೆಲೆಯಲ್ಲಿ ನಡೆದ ಸರಣಿ ಅಪಘಾತದಿಂದ ಜನತೆ ನೊಂದಿದ್ದು ಬುಧವಾರ ರಾತ್ರಿ ನಡೆಯಬೇಕಿದ್ದ ಕರಣ ಮಹೋತ್ಸವ ರದ್ದು ಮಾಡಲಾಗಿದೆ ಎಂದು ಧರ್ಮರಾಯಸ್ವಾಮಿ ದ್ರೌಪತಮ್ಮನವರ ದೇಗುಲ ಸಮಿತಿ ತಿಳಿಸಿದೆ.