ಅಲಮೇಲು ಮಂಗಮ್ಮ ದೇವಿ ತಿಲಕ ಕಾಣೆ
ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದದಲ್ಲಿರುವ ಅಲಮೇಲು ಮಂಗಮ್ಮ ದೇವಿಯ ನಿತ್ಯ ಧಾರಣೆ ತಿಲಕ ಕಾಣೆಯಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ರವಿ ಆಡಳಿತಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅಲುಮೇಲು ಮಂಗಮ್ಮ ದೇವಾಲಯದ ಅರ್ಚಕ ಶೇಷಾದ್ರಿ ಅವರೇ ಪೂಜೆ ಸಲ್ಲಿಸುತ್ತಿದ್ದು ತಿಲಕ ಕಾಣೆಯಾಗಿದೆ. ಈ ಬಗ್ಗೆ ಸಮಂಜಸ ಉತ್ತರ ನೀಡಬೇಕೆಂದು ದೇವಾಲಯ ಆಡಳಿತಾಧಿಕಾರಿ ವೆಂಕಟೇಶ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದಾರೆ.
ಕೊಳ್ಳೇಗಾಲ ಉಪವಿಭಾಗಾಧಿಕಾರಿ ಸತೀಶ್ಬಾಬು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ತಾತ್ಕಾಲಿಕವಾಗಿ ಬೇರೆ ತಿಲಕ ಹಾಕಲು ತಿಳಿಸಿದ್ದಾರೆ.