ಮಗುವಿಗೆ ನೀಡಿದ ಚುಚ್ಚುಮದ್ದು ಅಡ್ಡಪರಿಣಾಮ: ಸಾವು
ಚನ್ನಪಟ್ಟಣ: ಮಗುವಿಗೆ ನೀಡಿದ ಚುಚ್ಚುಮದ್ದು ಅಡ್ಡಪರಿಣಾಮ ಬೀರಿ ಮಗು ಸಾವಿಗೀಡಾಗಿರುವ ಘಟನೆ ತಾಲೂಕಿನ ಮೋಳೆ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಗ್ರಾಮದ ರಾಜು ಮತ್ತು ಕವಿತಾ ಎಂಬ ದಂಪತಿಗಳಿಗೆ ಸೇರಿದ್ದ ನಾಲ್ಕು ತಿಂಗಳ ಮಗು ಸಾವಿಗೀಡಾಗಿದ್ದು, ಬುಧವಾರ ಬೆಳಿಗ್ಗೆ ತಾಲೂಕಿನ ಅಕ್ಕೂರು ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿಸಲಾಗಿತ್ತು. ಈವೇಳೆ ತೀವ್ರ ಅಸ್ವಸ್ಥ ಗೊಂಡ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಬೆಂಗಳೂರಿನ ಸಂಜಯಗಾಂಧಿ ಮಕ್ಕಳ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಬೆಂಗಳೂರಿನಿಂದ ಮನೆಗೆ ಕರೆತರಲಾಗಿತ್ತಾದರೂ ಬುಧವಾರ ರಾತ್ರಿ ಮಗು ಸಾವಿಗೀಡಾಗಿದೆ. ದಂಪತಿಗಳಿಗೆ ಅವಳಿ ಹೆಣ್ಣು ಮಕ್ಕಳಿದ್ದು ಇದರಲ್ಲಿ ಒಂದು ಮಗು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವಿಗೀಡಾಗಿದೆ. ಮಗುವಿನ ಪೋಷಕರು ಈ ಸಂಬಂಧ ಅಕ್ಕೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ