ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

3ನೇ ಸ್ಥಾನಕ್ಕೆ ಕುಸಿದ ಜೆಡಿಎಸ್

Rashmi Kasaragodu
Updated On : 17 May 2014, 12:00 pm

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್  ನಿಕಟ ಪ್ರತಿಸ್ಪರ್ಥಿ ಬಿಜೆಪಿ ಪಿ.ಮುನಿರಾಜುಗೌಡ ವಿರುದ್ಧ 2.31 ಲಕ್ಷಗಳ ಭಾರಿ ಅಂತರದ ಗೆಲವು ಸಾಧಿಸಿದ್ದಾರೆ. ಜೆಡಿಎಸ್ 3ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.  
ಸುರೇಶ್ ಗೆಲವು ನಿರೀಕ್ಷಿತವೇ ಆಗಿದ್ದರೂ ಪಡೆದುಕೊಂಡಿರುವ ದೊಡ್ಡ ಮಟ್ಟದ ಅಂತರ, ಬಿಜೆಪಿ ಎರಡನೇ ಸ್ಥಾನಕ್ಕೇರಿರುವುದು ಮತ್ತು ಜೆಡಿಎಸ್ 3ನೇ ಸ್ಥಾನಕ್ಕೆ ಕುಸಿಯುವ ಮೂಲಕ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.
ಮತಗಳಿಗೆ ವಿವರ: ವಿಜೇತ ಅಭ್ಯರ್ಥಿ ಡಿ.ಕೆ.ಸುರೇಶ್ 6,52,723 ಮತಗಳನ್ನು ಪಡೆದುಕೊಂಡಿದ್ದರೆ, ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಪಿ.ಮುನಿರಾಜುಗೌಡ 4,21,243 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಆರ್.ಪ್ರಭಾಕರರೆಡ್ಡಿ 3,17,870 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾರಿ ನಿರೀಕ್ಷೆಯೊಂದಿಗೆ ಸ್ಪರ್ಧೆಗೆ ಇಳಿದಿದ್ದ ಆಪ್ ಅಭ್ಯರ್ಥಿ ರವಿಕೃಷ್ಣಾರೆಡ್ಡಿ 17,195 ಮತ್ತು ಬಿಎಸ್ಪಿಯ
ಸಿ.ತೋಪಯ್ಯ 11,594 ಮತಗಳನ್ನು ಗಳಿಸಿದ್ದಾರೆ.
ಉಳಿದಂತೆ ಅಧಿಕ ಮತಗಳ ಸರದಿ ನೋಟಾದ್ದೇ. ಅದಕ್ಕೆ 9871 ಮತಗಳು ಬಿದ್ದಿವೆ.
ನೋಟಾಕ್ಕೆ ಅಂಚೆ ಮತಪತ್ರದಲ್ಲೂ 3 ಮತಗಳು ಬಂದಿರುವುದು ವಿಶೇಷ. ಬಸವೇಗೌಡ 6154, ಕೆ.ಎ.ಮೋಹನ್ 1345, ಶಂಕರಪ್ಪ 1008, ಕೆಂಚಯ್ಯ 859, ಜೆ.ನಟರಾಜು 958, ಜೆ.ಟಿ.ಪ್ರಕಾಶ್ 1503, ಮಲ್ಲೇಶ್ 5420, ಮುನಾವರ್ ಷರೀಫ್ 2577, ಸಿದ್ದರಾಮ ಹೆಗ್ಗಡೆ 2142, ಸುರೇಶ್ 2782 ಮತಗಳನ್ನು ಪಡೆದಿದ್ದಾರೆ. ಅಂಚೆ ಮತಪತ್ರಗಳಲ್ಲಿ 366 ತಿರಸ್ಕೃತವಾಗಿವೆ.
ಕ್ಷೇತ್ರವಾರು ವಿವರ: ವಿಧಾನಸಭಾ ಕ್ಷೇತ್ರವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ಕಡೆ ಮುಂದಿದೆ. ಜೆಡಿಎಸ್ ಒಂದೇ ಒಂದು ಕಡೆಯೂ ಮುನ್ನಡೆ ಪಡೆಯಲಾಗಿಲ್ಲ. ರಾಮನಗರದಲ್ಲಿ ಕಾಂಗ್ರೆಸ್ 69214, ಜೆಡಿಎಸ್ 59487, ಬಿಜೆಪಿ 13317 ಮತಗಳನ್ನು ಪಡೆದಿವೆ.
ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ 64763, ಜೆಡಿಎಸ್ 32929, ಬಿಜೆಪಿ 32303, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ 105395, ಕಾಂಗ್ರೆಸ್ 73626, ಜೆಡಿಎಸ್ 27652, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ 134876, ಕಾಂಗ್ರೆಸ್ 98841, ಜೆಡಿಎಸ್ 22698 ಮತಗಳನ್ನು ಗಳಿಸಿದೆ.
ಆನೇಕಲ್ ಕ್ಷೇತ್ರದಲ್ಲಿ ಬಿಜೆಪಿ 86230, ಕಾಂಗ್ರೆಸ್ 79611, ಜೆಡಿಎಸ್ 16889, ಮಾಗಡಿಯಲ್ಲಿ ಕಾಂಗ್ರೆಸ್  74933, ಜೆಡಿಎಸ್ 64694, ಬಿಜೆಪಿ 20168, ಕನಕಪುರದಲ್ಲಿ ಕಾಂಗ್ರೆಸ್ 110414, ಜೆಡಿಎಸ್ 38937, ಬಿಜೆಪಿ 11843, ಚನ್ನಪಟ್ಟಣದಲ್ಲಿ ಕಾಂಗ್ರೆಸ್ 81224, ಜೆಡಿಎಸ್ 54538, ಬಿಜೆಪಿ 17018 ಮತಗಳನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement