ನರೇಂದ್ರ ಮೋದಿಗೆ ಭಾರಿ ಬೆಂಬಲ
ಮಾಗಡಿ : ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲೇ ಬೇಕು ಎಂದು ಮತದಾರರು ಅಭೂತಪೂರ್ವ ಜಯನೀಡುವ ಮೂಲಕ ರಾಜ್ಯದಲ್ಲಿ ಬಹುತೇಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಪ್ರಸಾದ್ ತಿಳಿಸಿದರು.
ಅವರು ಮಾಗಡಿ ಪಟ್ಟದ ಕಲ್ಯಾಗೇಟ್ ವೃತ್ತದಲ್ಲಿ ಮಾತನಾಡಿ ದೇಶಾದ್ಯಂತ ಬಿಜೆಪಿ ಅಭ್ಯರ್ಥಿಗಳ ಬಾರಿ ಬಹುಮತದಿಂದ ಗೆಲವು ಸಾಧಿಸಿದ್ದಾರೆ. ಈ ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿಯಾಗಿ ನೋಡಲು ಜನ ಕಾತುರರಾಗಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ನಿಜಗುಣಶಿವಯೋಗಿ, ಬಾಲಾಜಿ, ಕೆ.ಎಸ್. ಹರೀಶ್, ದಯಾನಂದ್, ಭೈರಣ್ಣ, ಮೂರ್ತಿ, ಜಯಶಂಕರ್, ಟಿ.ಸಿ. ರಮೇಶ್, ಪದ್ಮನಾಬ್, ರಾಜು ಇತರರು ಇದ್ದರು.