ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಸಂಗೀತ ಆಲಿಸುವುದರಿಂದ ಆರೋಗ್ಯ ವೃದ್ಧಿ'

Rashmi Kasaragodu
Updated On : 18 May 2014, 1:03 am

ಆನೇಕಲ್ಲು: ನಗುವುದರಿಂದ ಆರೋಗ್ಯ ಮತ್ತು ಆಯಸ್ಸು ವೃದ್ಧಿಯಾಗುತ್ತದೆ. ಹಾಗೆಯೇ ಸಂಗೀತ ಆಲಿಸುವುದರಿಂದ ರೋಗ ರುಜಿನಗಳು  ದೂರವಾಗಿ ದೀರ್ಘಾಯುಷಿಗಳಾಗಬಹುದು ಎಂದು ವಿದ್ವಾನ್ ವೇಣುಗೋಪಾಲ್ ತಿಳಿಸಿದ್ದಾರೆ. ಅವರು ಆನೇಕಲ್ಲಿನ ಶ್ರೀ ರಾಮ ಸೇವಾ ಸಮಿತಿಯವರು ಏರ್ಪಡಿಸಿದ್ದ ಭಕ್ತಿ ಸಿಂಚನ ಗೀತ ಗಾಯನ ಕಾರ್ಯಕ್ರಮದಲ್ಲಿ   ಸನ್ಮಾನ ಸ್ವೀಕರಿಸಿ ಮಾತನಾಡಿ ವೇದ ಶಾಸ್ತ್ರದ ಹಿನ್ನೆಲೆಯನ್ನು ಹೊಂದಿರುವ ಸಂಗೀತ ಶಾಸ್ತ್ರವನ್ನು ಕರಗತ ಮಾಡಿಕೊಳ್ಳಲು ನಿರಂತರ ಅಭ್ಯಾಸ ಮತ್ತು ಅನುಷ್ಠಾನ ಇರಬೇಕು.  ಹಾಡುವ ಕಲೆ ಹಾಗೂ ಸಂಗೀತ ಉಪಕರಣಗಳನ್ನು ನುಡಿಸುವ ಮೂಲಕ ಇಂಪಾದ ದ್ವನಿ ಸೃಷ್ಟಿಸುವುದು ಸುಲಭ ಸಾಧ್ಯ ಕೆಲಸವಲ್ಲ. ಆದರೂ ಕಲಿಯಬೇಕೆನ್ನುವ ಛಲ ಇದ್ದಲ್ಲಿ ಕಷ್ಟವೂ ಅಲ್ಲ ಎಂದರು.   ಆನೇಕಲ್ಲಿನ ಶ್ರೀ ರಾಮ ಸೇವಾ ಸಮಿತಿಯವರು ವೈಭವೋಪೇತ ಮಂಟಪ, ವೈಕುಂಠ ಹೋಲುವ ವೇದಿಕೆಯಲ್ಲಿ ಸುಂದರ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ನೀಡಿ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಿ ಮೂಡಿಬರಲು ಸಹಕರಿಸಿರುವುದು ಶ್ಲಾಘನೀಯ ಎಂದರು. ದಾಸರ ಪದಗಳು, ಭಾವಗೀತೆಗಳು, ಭಕ್ತಿ ಗೀತೆ, ಜನಪದ ಗೀತೆಗಳನ್ನು ಹಾಡುವ ಹಾಗೂ ಕೊಳಲು ಮೂಲಕ ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ತಂದೆ ವೇಣು ಗೋಪಾಲ್ ಮತ್ತು ಮಗಳು ವಾರಿಜಶ್ರೀ ಅವರ ಜುಗಲಬಂದಿ ವೇಣುವಾದನ ಆಕರ್ಷಣೀಯವಾಗಿತ್ತು. ಹಿಂದೂಸ್ಥಾನಿಯ ಪಿಬರೇ ರಾಮರಸಂ, ಆಡಿಸಿದಳು ಯಶೋದ, ಬೆಣ್ಣೆ ಕದ್ದ ನಮ್ಮ ಕೃಷ್ಣ, ಯಾವ ಮೋಹನ ಮುರಳಿ, ದೋಣಿ ಸಾಗಲಿ ಮುಂದೆ ಹೋಗಲಿ ಹಾಡುಗಳು ಇಂಪಾಗಿ ಮೂಡಿ ಬಂದವು. ಆನೇಕಲ್ಲಿನ ಕಾವ್ಯ ಕುಂಚ ಕಲಾವಿದ ಹಾಗೂ ಗೀತ ಚಿತ್ರ ಬ್ಯಾನರ್ ಮಾಂತ್ರಿಕ ಹರೀಶ್ ಹಾಡುಗಳಿಗೆ ಪೂರಕವಾದ ಚಿತ್ರಗಳನ್ನು ಬಿಡಿಸಿ ಜನತೆಯಿಂದ ಸೈ ಎನಿಸಿಕೊಂಡರು.
ನೆರಳೂರು ವಿವೇಕಾನಂದ ಶಾಲೆ ಶೇ. 100 ಫಲಿತಾಂಶ
ಆನೇಕಲ್ಲು: ಆನೇಕಲ್ ತಾಲೂಕು ನೆರಳೂರಿನ ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಶಾಲೆಯು 2013-14ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿದೆ ಎಂದು ಕಾರ್ಯದರ್ಶಿ ಜಿ. ನಾಗರಾಜು ತಿಳಿಸಿದ್ದಾರೆ. ಪ್ರಸಕ್ತ ಸಾಲಿಗೆ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 43 ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ಉಳಿದವರು ಎರಡನೇ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆಗಾಗಿ ಶಿಕ್ಷಕರು ಹಾಗೂ ಪೋಷಕರನ್ನು ಅಭಿನಂದಿಸಿದ್ದಾರೆ.
ಮುನಿಯಪ್ಪ ಗೆಲವಿಗೆ ವರ್ತೂರ್ ಹರ್ಷ
ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಅವರ ಗೆಲವಿಗೆ ಶಾಸಕ ವರ್ತೂರ್ ಪ್ರಕಾಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನಪರ ಕಾರ್ಯಕ್ರಮಗಳು ಮತ್ತು ಅಹಿಂದ ವರ್ಗದ ಮತಗಳು ಹಾಗೂ ಮುನಿಯಪ್ಪ ಅವರ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement