ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

70 ಕ್ವಿಂಟಲ್ 'ಅನ್ನಭಾಗ್ಯ'ಅಕ್ಕಿ ವಶ

Mainashree
Updated On : 22 May 2014, 11:55 am

ರಾಮನಗರ: ಇಲ್ಲಿನ ಯಾರಬ್ ನಗರದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ದಾಸ್ತಾನಿನ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 70 ಕ್ವಿಂಟಲ್ಗೂ ಹೆಚ್ಚು ಅಕ್ಕಿಯನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.
ಯಾರಬ್ ನಗರದ ಪಿಎಸ್ವಿ ಕಾಲೋನಿಯಲ್ಲಿ ಮಹಮದ್ ಇಕ್ಬಾಲ್ ಎಂಬುವವರ ಮನೆಯಲ್ಲಿ ಸುಮಾರು 70ಕ್ವಿಂಟಲ್ಗೂ ಅಧಿಕ ಅಕ್ಕಿ ಹಾಗೂ ಗೋಧಿಯನ್ನ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಅಪ್ಸರ್ ಪಾಷ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದರು.
ದಾಳಿಯ ಸುಳಿವನ್ನು ಅರಿತ ಮನೆಯ ಮಾಲೀಕ ಮಹಮದ್ ಇಕ್ಬಾಲ್ ಮತ್ತು ಈತನ ಸಹಚರ ಸಾದಿಕ್ ಅನ್ಸಾರಿ ಪರಾರಿಯಾಗಿದ್ದಾರೆ.
ಇವರಿಬ್ಬರು ಸೇರಿ ಏಜೆಂಟರ ಸಹಾಯದಿಂದ ಪಡಿತರ ಚೀಟಿದಾರರಿಂದ ಅನ್ನಭಾಗ್ಯ ಅಕ್ಕಿಯನ್ನು 10 ರಿಂದ 11 ನೀಡಿ ಖರೀದಿಸುತ್ತಿದ್ದರು. ನಂತರ ಇದೇ ಅಕ್ಕಿಗೆ ಪಾಲಿಶ್ ಮಾಡಿಸಿ ಮುಕ್ತ ಮಾರುಕಟ್ಟೆಯಲ್ಲಿ ರು. 30 ರಿಂದ ರು. 40ಕ್ಕೆ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ 1958ರ ಅಗತ್ಯ ವಸ್ತುಗಳ ಕಾಯ್ದೆ ಅನ್ವಯ ಮನೆ ಮಾಲೀಕ, ಈತನ ಸಹಚರ ಹಾಗೂ ಏಜೆಂಟಟ್ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಆಹಾರ ನಿರೀಕ್ಷಕ ಜಯಪ್ರಕಾಶ್ ಮತ್ತು ವೆಂಕಟಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement