ಅದ್ಧೂರಿ ಗಂಗಾತಾಯಿ ಜಾತ್ರಾ ಮಹೋತ್ಸವ
ವಿಜಯಪುರ: ಪಟ್ಟಣದ ಗ್ರಾಮ ದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವ ಮತ್ತು ದೀಪಾರತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಭಕ್ತರು ದೇವಾಲಯಕ್ಕೆ ಬಂದು ಅಮ್ಮನವರಿಗೆ ತಂಬಿಟ್ಟಿನ ಆರತಿ ಮಾಡುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಜಾತ್ರೆ ಪ್ರಯುಕ್ತ ಏರ್ಪಡಿಸಿದ್ದ ಹಲಗೆ ಬಡಿತ, ಗಾರುಡಿ ಗೊಂಬೆ ಕುಣಿತ, ಘಂಟಸಾಲ ಕಲಾವೃಂದದವರಿಂದ ಭಕ್ತಿ ಗೀತೆ, ಭಾವಗೀತೆಗಳ ಕಾರ್ಯಕ್ರಮ ನಡೆಯಿತು.
ದುರ್ಗಾತಾಯಿ ಕಾಲೋನಿಯ ದುರ್ಗಾತಾಯಿ, ಸತ್ಯಮ್ಮ ಹಾಗೂ ಸಪ್ಪಲಮ್ಮ ದೇವಿಯವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಪುರಸಭಾ ಮುಖ್ಯಾಧಿಕಾರಿ ಮಾರುತಿ ಶಂಕರ್, ಪುರಸಭಾಧ್ಯಕ್ಷೆ ಅನಸೂಯಮ್ಮ ಸಂಪತ್ ಕುಮಾರ್, ವಿ. ಮಂಜುನಾಥ್, ಎಂ. ಸತೀಶ್ ಕುಮಾರ್, ಎನ್. ನಾರಾಯಣಸ್ವಾಮಿ, ಎಂ. ಚಿನ್ನಯ್ಯ, ಪುರಸಭಾ ಸದಸ್ಯರಾದ ನಿಸ್ಸಾರ್, ನಾಗರಾಜು, ತಿರುಮಳೇಶ್ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಇದ್ದರು.