ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಮ್ಮ ಬೆಂಗಳೂರು ನಮ್ಮ ಕೊಡುಗೆ ಚಾಲನೆ

Mainashree
Updated On : 23 May 2014, 12:01 pm

ಆನೇಕಲ್ಲು: ಬೆಂಗಳೂರು ಮಹಾನಗರ ಬುದ್ಧಿ ಜೀವಿಗಳ ಹಾಗೂ ಮಾಹಿತಿ ತಂತ್ರಜ್ಞಾನ ದಿಗ್ಗಜರ ಆವಾಸ ಸ್ಥಾನವೆಂದು ವಿಶ್ವ ಪ್ರಸಿದ್ಧವಾಗಿದೆ. ನಗರ ಬೆಳೆದಂತೆ ಸಮಸ್ಯೆಗಳೂ ಬೆಳೆಯುತ್ತಿದ್ದು ಶಾಶ್ವತ ಪರಿಹಾರದತ್ತ ಯೋಜನೆ ರೂಪಿಸಬೇಕಿದೆ ಎಂದು ಬೆಂಗಳೂರು ಮಹಾ ಪೌರ ಬಿ.ಎಸ್. ಸತ್ಯನಾರಾಯಣ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಹೊಟೇಲ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಏರಿಯ(ಎಲ್ಸಿಅ)ಅಸೋಸಿಯೇಶನ್ ಪದಾಧಿಕಾರಿಗಳಿಗಾಗಿ ಬಿಬಿಎಂಪಿ ಏರ್ಪಡಿಸಿದ್ದ ಖಾಸಗಿ ಸಭೆಯಲ್ಲಿ ಮಾತನಾಡಿ, ಬಿಬಿಎಂಪಿ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ದಾನಿಗಳ ಸಲಹೆ ಸಹಕಾರ ಸೂಚನೆಗಳನ್ನು ಸ್ವಾಗತಿಸಲು ಸಿದ್ಧವಿದ್ದು ಖಾಸಗೀ ಸಹಭಾಗಿತ್ವದಲ್ಲಿ ಕೆಲ ಯೋಜನೆಗಳ ಜಾರಿಗೆ ಬದ್ಧವಾಗಿದೆ ಎಂದರು.
ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ತಾವು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಎಲ್ಸಿಅ ಬೇಡಿಕೆಯನ್ನು ಮನ್ನಿಸಿ ಬೆಂಗಳೂರಿಗೆ ತಂದ ವಿಶೇಷ ಬಸ್ಗಳನ್ನು ಎಲೆಕ್ಟ್ರಾನಿಕ್ ಸಿಟಿ ಮಾರ್ಗಕ್ಕೆ ನೀಡಲಾಗಿತ್ತು. ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಶಾಸಕರ ನಿಧಿ ನೀಡಿ ನೆರೆ ಹೊರೆ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ಕೋರಲಾಗಿತ್ತು.
 ಎಲ್ಸಿಅ ಬನ್ನೇರುಘಟ್ಟ ಉದ್ಯಾನವನದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದು ಬಿಬಿಎಂಪಿಯ ನಮ್ಮ ಬೆಂಗಳೂರು ನಮ್ಮ ಕೊಡುಗೆ ಯೋಜನೆಗೆ ಉದಾರವಾಗಿ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಎಲ್ಸಿಅ ಅಸೋಸಿಯೇಷನ್ ಸಿಇಒ ರಮ ಮಾತನಾಡಿ, ಉತ್ತಮ ಆಲೋಚನೆಗಳಿಗೆ ಸ್ಪಂದಿಸುವುದಾಗಿ, ಜೂನ್ 2ರ ಒಳಗಾಗಿ ಪ್ರಸ್ಥಾವನೆ ನೀಡಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ನಮ್ಮ ಬೆಂಗಳೂರು ನಮ್ಮ ಕೊಡುಗೆಯ ಬೆಂಗಳೂರು ಬಗ್ಗೆ ನಮ್ಮ ಕನಸು ವೆಬ್ಸೈಟ್ಗೆ ಸಿಇಒ ರಮ ಪೌರ ಸತ್ಯನಾರಾಯಣ ಹಾಗೂ ಶಾಸಕ ಕೃಷ್ಣಪ್ಪ ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement