ವೇತನ ಹೆಚ್ಚಳಕ್ಕೆ ಟೋಲ್ ಕಾರ್ಮಿಕರ ಆಗ್ರಹ
ಆನೇಕಲ್ಲು: ಬಿಇಟಿಎಲ್ ಸಂಸ್ಥೆ ರಾಷ್ಟ್ರೀಯ ಹೆದ್ದಾರಿ 7ರಲ್ಲಿ 250ಕ್ಕೂ ಹೆಚ್ಚು ಟೋಲ್ ಶುಲ್ಕ ವಸೂಲು ಮಾಡುವ ಕಾರ್ಮಿಕರಿಗೆ ಸತತ 4 ವರ್ಷಗಳಿಂದ ಸಂಬಳ ಹೆಚ್ಚಿಸದೇ ವಂಚಿಸುತ್ತಿದೆ ಎಂದು ಟೋಲ್ ಸಂಸ್ಥೆಯ ಕಾರ್ಮಿಕ ಬಳಗದ ಅಧ್ಯಕ್ಷ ಗಿರೀಶ್ ನಾಯಕ್ ಆರೋಪಿಸಿದ್ದಾರೆ.
3 ಪಾಳಿಯಲ್ಲಿ ಕೆಲಸ ಮಾಡುವ ನೂರಾರು ನೌಕರರನ್ನುದ್ದೇಶಿಸಿ ಮಾತನಾಡಿ, ಆಂಧ್ರ ಮೂಲದ ಕಾರ್ಮಿಕರಿಗೆ ದುಪ್ಪಟ್ಟು ವೇತನ ಹಾಗೂ ಇತರೇ ಭತ್ಯೆ ನೀಡಿ ತಾರತಮ್ಯ ಧೋರಣೆ ಅನುಸರಿಸುತ್ತಾರೆ. ಪ್ರತಿ ವರ್ಷವೂ ಹೊರ ರಾಜ್ಯದವರನ್ನೇ ಸಿಇಒಗಳಾಗಿ ನೇಮಕ ಮಾಡಿ ಕನ್ನಡಿಗರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜನ್, ರಂಗಸ್ವಾಮಿ, ಓಂಕಾರಪ್ಪ ಮಾತನಾಡಿದರು. ಹನುಮಂತರಾಯ, ನವೀನ್, ಅನಂತು ಇದ್ದರು.