ಹಿರಿಯ ಕಲಾವಿದ ಯಲ್ಲಪ್ಪ ನಿಧನ
ದೊಡ್ಡಬಳ್ಳಾಪುರ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದ ಮತ್ತು ಕಿರುತೆರೆ ನಟ ಯಲ್ಲಪ್ಪ(77) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಬುಧವಾರ ರಾತ್ರಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೂವರು ಪುತ್ರಿಯರು, ಪುತ್ರ ಹಾಗೂ ಪತಿ ಇದ್ದಾರೆ. ಹಲವು ಟಿ.ವಿ. ಧಾರಾವಾಹಿಗಳು ಸೇರಿದಂತೆ ನೂರಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಕರ್ನಾಟಕ ರಮಾರಮಣ ನಾಟಕದಲ್ಲಿ ಅವರ ಮಹಾಮಂತ್ರಿ ತಿಮ್ಮರಸರ ಪಾತ್ರ ಅಮೋಘ ಮತ್ತು ಅವಿಸ್ಮರಣೀಯ. ಇದಕ್ಕಾಗಿ ಅವರು ರಾಜ್ಯ ಪ್ರಶಸ್ತಿಯನೂ ಪಡೆದಿದ್ದರು. ಕೃಷ್ಣಸಂಧಾನ, ರಾಜಾಸತ್ಯವ್ರತ, ಮುಖವಾಡಗಳು ಪ್ರಸಿದ್ಧ ನಾಟಕಗಳು.ದೊಡ್ಡಬಳ್ಳಾಪುರದಲ್ಲಿ ನಟಗಂಗೋತ್ರಿ ಸಂಸ್ಥೆಯ ಪುನಶ್ಚೇತನ ಮತ್ತು ಕಟ್ಟಿಬೆಳೆಸಿದ ಕೀರ್ತಿಗೂ ಅವರು ಪಾತ್ರರಾಗಿದ್ದರು.