ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೈದರಾಬಾದ್ ವಿಜಯಪಾಲ್ ತಂಡಕ್ಕೆ ಜಯ

Mainashree
Updated On : 24 May 2014, 12:17 pm

ದೇವನಹಳ್ಳಿ: ದೇವನಹಳ್ಳಿ ಯೂತ್ ಕ್ರಿಕೆಟ್ ಅಕಾಡಮಿಯವರು ಮೇ 14 ರಿಂದ 21 ರವರೆಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ರಾಣಿ ಕ್ರಾಸ್ ಬಳಿಯ ಮುತ್ತಪ್ಪ ರೈ ಲೇ ಔಟಿನಲ್ಲಿ ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ 17,14, ಹಾಗೂ 12 ವಯೋವಾನದ ಬಾಲಕರ 15 ತಂಡಗಳು ಭಾಗವಹಿಸಿದ್ದವು ಎಂದು ಮುಖ್ಯ ತರಬೇತುದಾರ ಜಗನ್ನಾಥ್ ತಿಳಿಸಿದರು.
17 ವಯೋವಾನದ ಫೈನಲ್ಸ್‌ನಲ್ಲಿ ಹೈದರಾಬಾದ್ ವಿಜಯಪಾಲ್ ಕ್ರಿಕೆಟ್ ತಂಡ ದೇವನಹಳ್ಳಿ ಕ್ರಿಕೆಟ್ ತಂಡದ ವಿರುದ್ಧ ಜಯಗಳಿಸಿದೆ.
14 ವಯೋವಾನದ ಫೈನಲ್ಸ್‌ನಲ್ಲಿ ದೇವನಹಳ್ಳಿ ತಂಡ ಹೈದರಾಬಾದ್ ಕ್ರಿಕೆಟ್ ತಂಡದ ವಿರುದ್ಧ ಜಯಗಳಿಸಿದೆ. 12 ವಯೋವಾನದ ವಿಭಾಗದಲ್ಲಿಯೂ ಹೈದರಾಬಾದ್ ತಂಡ ಜಯಗಳಿಸಿದೆ.
 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ರಿಕೆಟ್ ಆಟಗಾರ ಎಸ್.ಅರವಿಂದ್ ಬಹುಮಾನಗಳನ್ನು ವಿತರಣೆ ಮಾಡಿದರು. ಪ್ರತಿಯೊಬ್ಬರಿಗೂ ವಿವಿಧ ಕ್ರೀಡೆಗಳ ಬಗ್ಗೆ ಹುಚ್ಚು ಇರುತ್ತದೆ. ಆದರೆ ಕ್ರೀಡೆಗಳಿಂದ ಉತ್ತಮ ಆರೋಗ್ಯ ಸಂಪಾದಿಸಬಹುದಾದರೂ ಮೊದಲು ವಿದ್ಯೆಗೆ ಆದ್ಯತೆ ನೀಡಲೇಬೇಕು ಎಂದರು.
 ಸಂಘದ ಅಧ್ಯಕ್ಷ ಎ. ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು,  ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘದ ಅಧ್ಯಕ್ಷ ಸಿ.ಜಗನ್ನಾಥ್ ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement