ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮದ್ಯಪಾನ ತಪಾಸಣೆ ವೇಳೆ ಮುಖ್ಯ ಪೇದೆಗೆ ಬೈಕ್ ಡಿಕ್ಕಿ

Mainashree
Updated On : 26 May 2014, 12:13 pm

ಬೆಂಗಳೂರು: ಮದ್ಯಪಾನ ತಪಾಸಣೆ ವೇಳೆ ದ್ವಿಚಕ್ರ ವಾಹನ ಸವಾರನೊಬ್ಬ ಸಂಚಾರ ಪೊಲೀಸ್ ಮುಖ್ಯ ಪೇದೆಗೆ  ಡಿಕ್ಕಿ ಹೊಡೆದಿರುವ ಘಟನೆ ಸುಂಕದಕಟ್ಟೆ ಕೆಬ್ಬೆಹಳ್ಳಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ಪೇದೆ ತಮ್ಮಯ್ಯ ಎಂಬುವರ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಡಿಕ್ಕಿ ಮಾಡಿದ ದ್ವಿಚಕ್ರ ವಾಹನ ಸವಾರ ರಮೇಶ್ (32) ಎಂಬಾತನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ 9.30ರ ಸುಮಾರಿಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಿರಂಜನ್ ಕುಮಾರ್, ಮುಖ್ಯಪೇದೆ ತಮ್ಮಯ್ಯ, ಪೇದೆಗಳಾದ ಗೋಪಾಲ್ ಹಾಗೂ ಕುಮಾರ್ ನಾಯಕ್ ಎಂಬುವರು ಮದ್ಯಪಾನ ತಪಾಸಣೆ ನಡೆಸುತ್ತಿದ್ದರು. ಅನ್ನಪೂರ್ಣೇಶ್ವರಿ ಬಡಾವಣೆ ನಿವಾಸಿ ನಾಗರಬಾವಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಮದ್ಯಪಾನ ಮಾಡಿ ನಾಗರಬಾವಿ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ವೇಗವಾಗಿ ಬರುತ್ತಿದ್ದ.
 ಈ ವೇಳೆ ಸಂಚಾರ ಪೊಲೀಸರು ತಪಾಸಣೆಗಾಗಿ ರಮೇಶ್‌ನನ್ನು ತಡೆಯಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ರಮೇಶ್ ತಪ್ಪಿಸಿಕೊಳ್ಳುವ ಭರದಲ್ಲಿ ಮುಖ್ಯ ಪೇದೆ ತಮ್ಮಯ್ಯ ಅವರಿಗೆ ಡಿಕ್ಕಿ ಹೊಡೆದು ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ.
ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
 ರಮೇಶ್ ಮದ್ಯಪಾನ ಮಾಡಿರುವುದು ಪರೀಕ್ಷೆ ವೇಳೆ ಕಂಡು ಬಂದಿದೆ. ಪೊಲೀಸರ ತಪಾಸಣೆಗೆ ಅಸಹಕಾರ, ಡಿಕ್ಕಿ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement