ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂಸದ ಪ್ರತಾಪ ಸಿಂಹಗೆ ಮೈಸೂರು ಸಿಂಹ ಬಿರುದು

Mainashree
Updated On : 26 May 2014, 10:46 am

ರಾಮನಗರ : ಹದಿನೇಳು ವರ್ಷ ಆಳಿದ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಎನಿಸಿಕೊಂಡರು. ಅದೇ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿರುವ ಖ್ಯಾತ ಪತ್ರಕರ್ತ ಪ್ರತಾಪ ಸಿಂಹ ಅವರಿಗೆ ರಾಮನಗರದ ಅಭಿಮಾನಿಗಳು ಮೈಸೂರು ಸಿಂಹ ಎಂದು ಬಿರುದಿತ್ತಿದ್ದಾರೆ.  ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಅಳವಡಿಸಿದ್ದ ಪ್ರಚಾರ ಸಾಮಗ್ರಿಗಳ ಪೈಕಿ ಪ್ರತಾಪ ಸಿಂಹ ಅವರನ್ನು ಮೈಸೂರು ಸಿಂಹ ಎಂದು ಬಿಂಬಿಸಿದ್ದ ಕೆಲ ಫ್ಲೆಕ್ಸ್‌ಗಳು ಅಲ್ಲಲ್ಲಿ ರಾರಾಜಿಸುತ್ತಿದ್ದವು.  ರಾಮನಗರ ಗೆಳೆಯರ ಬಳಗದ ಹೆಸರಿನಲ್ಲಿ ಈ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ನರೇಂದ್ರ ಮೋದಿ ಅವರೊಟ್ಟಿಗೆ ಪ್ರತಾಪ ಸಿಂಹ ಅವರಿಗೂ ಶುಭಾಶಯ ಕೋರಲಾಗಿತ್ತು. ಪ್ರತಾಪ ಸಿಂಹ ಭಾವಚಿತ್ರದ ಮೇಲೆ ಘರ್ಜಿಸುತ್ತಿರುವ ಸಿಂಹದ ತಲೆಯಿತ್ತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement